Wednesday, November 13, 2024
Homeಚುನಾವಣೆ 2023ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್‌ ನೀಡದಂತೆ ಮುಸ್ಲಿಂ ಮುಖಂಡರ ಪಟ್ಟು.!

ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್‌ ನೀಡದಂತೆ ಮುಸ್ಲಿಂ ಮುಖಂಡರ ಪಟ್ಟು.!

ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಾರದೆಂಬ ಕೂಗು ಮುಸ್ಲಿಂ ಮುಖಂಡರಿಂದ ಕೇಳಿ ಬರುತ್ತಿದೆ. ಡಿಜೆ ಹಳ್ಳಿ -ಕೆಜೆ ಹಳ್ಳಿ ಗಲಭೆಗೆ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಜವಾಬ್ದಾರಿಯಾಗಿದ್ದು, ಸ್ಥಳೀಯ ಮುಖಂಡರು ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿ ಟಿಕೆಟ್‌ ನೀಡದಂತೆ ಪಟ್ಟು ಹಿಡಿಯುತ್ತಿದ್ದಾರೆ.

ಬೇರೆ ಯಾರಿಗೇ ಟಿಕೆಟ್‌ ನೀಡಿದರೂ ಓಕೆ, ಆದ್ರೆ, ಅಖಂಡಗೆ ಮಾತ್ರ ಟಿಕೆಟ್‌ ನೀಡಬಾರದೆಂಬ ಪಟ್ಟನ್ನು ಸ್ಥಳೀಯ ಮುಸ್ಲಿಮರು ಇಟ್ಟಿರುವುದು ಕಾಂಗ್ರೆಸ್‌ ಗೂ ತಲೆನೋವಾಗಿ ಪರಿಣಮಿಸಿದೆ.  

ಅದಾಗ್ಯೂ, ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಅಖಂಡ ಪರವಾಗಿ ಲಾಬಿ ಮಾಡುತ್ತಿದ್ದ, ಮುಸ್ಲಿಂ ಮುಖಂಡರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರವಾದಿ ನಿಂದನೆ ಪ್ರಕರಣದ ನಂತರ ನಡೆದ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರೇ ಹೊಣೆ. ಅವರು ಆ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ ಎನ್ನುವುದು ಮುಸ್ಲಿಂ ಮುಖಂಡರ ಆರೋಪವಾಗಿದೆ.

ಹೆಚ್ಚಿನ ಸುದ್ದಿ

error: Content is protected !!