ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊ*ಲೆ ಪ್ರಕರಣ (Renukaswamy Case) ಸಂಬಂಧ ಈಗಾಗಲೇ ಟ್ರಯಲ್ (Trial ) ಆರಂಭವಾಗಿದೆ. ನಟ ದರ್ಶನ್ (Darshan) ಪ್ರಕರಣದ ಟ್ರಯಲ್ ಅನ್ನು ಪ್ರತಿ ದಿನ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ರು.
ಈ ಸಂಬಂಧ ಪ್ರಾಸಿಕ್ಯೂಷನ್ ಪರ ವಕೀಲ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ರು. ಪ್ರತಿದಿನ ಪ್ರಕರಣದ ವಿಚಾರಣೆ ಮಾಡುವ ಅಗತ್ಯ ಇಲ್ಲ ಎಂದು ಸುಪ್ರಿಂ ಕೋರ್ಟಿನ ಅಭಿಪ್ರಾಯದ ಮಾಹಿತಿಯನ್ನು ನೀಡಿದ್ರು. ಜೊತೆಗೆ ಇದೇ ಕೋರ್ಟ್‌ನಲ್ಲಿ ಸುಮಾರು 977 ಪ್ರಕರಣಗಳ ಟ್ರಯಲ್ ನಡೆಯುತ್ತಿದೆ. ಹೀಗಿರುವಾಗ ಎಲ್ಲ ಕೇಸ್ ಗಳನ್ನ ಬಿಟ್ಟು ಈ ಪ್ರಕರಣವನ್ನೇ ಯಾಕೆ ಪ್ರತಿದಿನ ವಾದ ಮಾಡಬೇಕು. ಈಗಾಗಲೇ ವಾರಕ್ಕೆ ಎರಡು ದಿನ ಟ್ರಯಲ್ ನಡೆಯುತ್ತಿದೆ. ಅದೇ ರೀತಿ ಮುಂದುವರಿಯಲಿ, ಪ್ರತಿದಿನದ ಟ್ರಯಲ್‌ಗೆ ಅವಕಾಶ ನೀಡದಂತೆ ಮನವಿ ಮಾಡಿದ್ರು.
ಇದೇ ವೇಳೆ ಮಹಜರ್ ವೇಳೆ ತನಿಖಾಧಿಕಾರಿ ಗಿರೀಶ್ ನಾಯಕ್ ಸುಳ್ಳುಸಾಕ್ಷಿ ಸೃಷ್ಠಿಸಿದ್ದಾರೆ ಎಂದು ಸಲ್ಲಿಸಿ ಅರ್ಜಿ ಸಂಬಂಧ ಕೂಡ ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ರು. ಕಾಮಾಕ್ಷಿಪಾಳ್ಯ ಠಾಣೆಯ ನೆಲ ಮಹಡಿಯಲ್ಲೋ, ಇಲ್ಲ ಮೊದಲ ಮಹಡಿಯಲ್ಲೋ ಫೋಟೋ ತೆಗೆಯಲಾಗಿದೆ. ಅದನ್ನ ತನಿಖಾಧಿಕಾರಿ ವಿಟ್ನೆಸ್ ಬಾಕ್ಸ್ ಗೆ ಬಂದಾಗ ಕೇಳಬಹುದು. ಆದ್ರೆ ಸಲ್ಲಿಕೆ ಮಾಡಿದ್ದ ಪೋಟೊದಲ್ಲಿ ಮೊಬೈಲ್ ಮಹಜರ್ ಮಾಡಿರುವುದು ಮುಖ್ಯ. ಅಲ್ಲದೆ ಆ ಮೊಬೈಲ್ ಗಳು ಆರೋಪಿಗಳದ್ದೆ, ಅದೇ ಮೊಬೈಲ್ ನಿಂದ ಡಿಜಿಟಲ್ ಸಾಕ್ಷ್ಯಗಳನ್ನ ಸಂಗ್ರಹಿಸಲಾಗಿದೆ. ಹೀಗಾಗಿ ಇಂತ ಅರ್ಜಿಗಳನ್ನ ನ್ಯಾಯಾಲಯ ಮ್ಯಾನ ಮಾಡಬಾರದು. ಕೇವಲ ಮಾಧ್ಯಮಗಳ ಪ್ರಚಾರಕ್ಕಾಗಿ ಇಂತಹ ಅರ್ಜಿಗಳನ್ನ ಸಲ್ಲಿಕೆ ಮಾಡಲಾಗಿದೆ ಎಂದು ಆರೋಪಿಸಿದ್ರು.
ಇದನ್ನೂ ಓದಿ: ಪಾಪರಾಜಿಗಳ ವಿರುದ್ಧ ಸಿಡಿದೆದ್ದ ಸ್ಯಾಂಡಲ್‌ವುಡ್ ನಟಿಯರು – ಹೇಳಿದ್ದೇನು..?
ಇನ್ನು crpc 319 ರ ಅಡಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತನಿಖಾಧಿಕಾರಿ ಅಪರಾಧದಲ್ಲಿ ಭಾಗಿಯಾಗಿದ್ರೆ ಮಾತ್ರ crpc 319 ಅನ್ವಯ ಆಗುತ್ತದೆ. ಆದರೆ ಇದರಲ್ಲಿ ಯಾವ ಕಾರಣಕ್ಕೆ ತನಿಖಾಧಿಕಾರಿಯನ್ನ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಪ್ರಶ್ನಿಸಿದ್ರು. ಅಲ್ಲದೆ ಆರೋಪಿ ಪರ ವಕೀಲರು ಪೊಲೀಸ್ ಠಾಣೆಗೆ ಭೇಟಿ ನೀಡಿ ಕಲೆಹಾಕುವ ಸಾಕ್ಷ್ಯಕ್ಕೆ ಯಾವ ಮಾನ್ಯತೆ ಇರಲಿದೆ. ಪೊಲೀಸ್ ಠಾಣೆಗಳಲ್ಲಿ ರೇಪ್, ಪೋಕ್ಸೋ ಅಂತ ಸೆನ್ಸಿಟೀವ್ ಪ್ರಕರಣದ ಆರೋಪಿಗಳು ಇರುತ್ತಾರೆ. ಜೊತೆಗೆ ಸೆನ್ಸಿಟೀವ್ ಪ್ರಕರಣದ ತನಿಖೆ ನಡೆಯುತ್ತಿರುತ್ತದೆ. ಇಂತ ಸಮಯದಲ್ಲಿ ವಕೀಲರ ತಂಡಕ್ಕೆ ಠಾಣೆಗೆ ಭೇಟಿಗೆ ಅವಕಾಶ ನೀಡಲು ಹೇಗೆ ಸಾಧ್ಯ ಇದರಲ್ಲಿದೆ ಎಂದು ವಾದ ಮಂಡಿಸಿದ್ರು.
ಇದೇ ವೇಳೆ ಪ್ರಕರಣ ಟ್ರಯಲ್ ಅನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ ಮಾಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡುತ್ತಾರೆ. ಆದರೆ ಕೋರ್ಟಿನಿಂದ ಹೊರಹೋದ ಬಳಿಕ ಮಾಧ್ಯಮಗಳ ಮುಂದೆ ಹೇಳಿಕೆ ಕೊಡ್ತಾರೆ. ಹೀಗಿದ್ದಾಗ ಯಾಕೆ ಇನ್ ಕ್ಯಾಮೆರಾ ಪ್ರೊಸಿಡಿಂಗ್ ಮಾಡಬೇಕು. ಈ ಪ್ರಕರಣ ಏನು ಅತ್ಯಾಚಾರ ಪ್ರಕರಣವು ಅಲ್ಲ, ಪೋಕ್ಸೋ ಪ್ರಕರಣವು ಅಲ್ಲ ಎಂದು ಎಸ್ ಪಿ ಪಿ ವಾದ ಮಂಡಿಸಿದ್ರು.
ಮೂರು ಅರ್ಜಿಗಳ ಸಂಬಂಧ ವಾದ ಆಲಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನ ಮಾರ್ಚ್ 9 ಕ್ಕೆ ಮುಂದೂಡಿಕೆ ಮಾಡಿದ್ದು, ಎಲ್ಲಾ ಅರ್ಜಿಗಳ ಸಂಬಂಧ ಆದೇಶ ನೀಡಲಿದೆ.