Wednesday, August 19, 2026
Homeಟಾಪ್ ನ್ಯೂಸ್DONALD TRUMP: ಹೊರ್ಮುಜ್ ಜಲಸಂಧಿ ಗಾರ್ಡಿಯನ್ಸ್ ನಾವು! ಕಾವಲು ಕಾಯಲು ಬಿಲಿಯನ್ ಡಾಲರ್ 'ಫೀಸ್' ಕೇಳಿದ...

DONALD TRUMP: ಹೊರ್ಮುಜ್ ಜಲಸಂಧಿ ಗಾರ್ಡಿಯನ್ಸ್ ನಾವು! ಕಾವಲು ಕಾಯಲು ಬಿಲಿಯನ್ ಡಾಲರ್ ‘ಫೀಸ್’ ಕೇಳಿದ ಡೊನಾಲ್ಡ್ ಟ್ರಂಪ್

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ಈಗ ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹೊರ್ಮುಜ್ ಜಲಸಂಧಿಯ (Strait of Hormuz) ಮೇಲೆ ನಿಯಂತ್ರಣ ಸಾಧಿಸುವ ಮಟ್ಟಕ್ಕೆ ತಲುಪಿದೆ. ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ಜಲಸಂಧಿಯನ್ನು ತಮ್ಮ ಸೇನೆ ವಶಪಡಿಸಿಕೊಳ್ಳುತ್ತಿದೆ ಎಂದು ಪ್ರಕಟಿಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್ ಇಡೀ ಜಲಸಂಧಿಯನ್ನೇ ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ.

“ನಾವು ಜಲಸಂಧಿಯ ಗಾರ್ಡಿಯನ್ ಏಂಜೆಲ್”: ಟ್ರಂಪ್ ಹಠಾತ್ ಘೋಷಣೆ
ಪ್ರಸಿದ್ಧ ವಾಹಿನಿ ‘ಫಾಕ್ಸ್ & ಫ್ರೆಂಡ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಹೊರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದ್ದೇವೆ. ಇರಾನ್ ಬಳಿ ಈಗ ಏನೂ ಉಳಿದಿಲ್ಲ. ಇರಾನ್‌ನಿಂದ ಎದುರಾಗಿದ್ದ ಈ ಭೀತಿಯನ್ನು ಅಮೆರಿಕ 47 ವರ್ಷಗಳ ಹಿಂದೆಯೇ ಮುಗಿಸಬೇಕಿತ್ತು” ಎಂದಿದ್ದಾರೆ.

ಇನ್ನು ಮುಂದೆ ನಾವೇ ಈ ಜಲಸಂಧಿಯ ಕಾವಲುಗಾರರು (ಗಾರ್ಡಿಯನ್ ಏಂಜೆಲ್). ಇಷ್ಟು ದಿನ ಅಮೆರಿಕ ಇಲ್ಲಿ ಪುಕ್ಕಟೆಯಾಗಿ ರಕ್ಷಣೆ ನೀಡುತ್ತಿತ್ತು. ಆದರೆ ಇನ್ನು ಮುಂದೆ ಹಾಗಾಗಲ್ಲ. ಈ ಮಾರ್ಗವನ್ನು ಬಳಸುವ ಜಗತ್ತಿನ ಶ್ರೀಮಂತ ರಾಷ್ಟ್ರಗಳು ಅಮೆರಿಕದ ಸೈನಿಕರ ಜೀವವನ್ನು ಪಣಕ್ಕಿಟ್ಟು ನೀಡುವ ಈ ರಕ್ಷಣೆಗೆ ಪ್ರತಿಯಾಗಿ ನಮಗೆ ಭಾರಿ ಮೊತ್ತದ ಹಣವನ್ನು (Reimbursement) ಪಾವತಿಸಬೇಕಾಗುತ್ತದೆ” ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಅಲ್ಲದೆ, ಇರಾನ್‌ನ ನೌಕಾಪಡೆ, ವಾಯುಪಡೆ ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ಯುಎಸ್ ಪಡೆಗಳು ಸಂಪೂರ್ಣವಾಗಿ ಧ್ವಂಸಗೊಳಿಸಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಜಲಸಂಧಿಯನ್ನು ಬಂದ್ ಮಾಡಿದ ಇರಾನ್!
ಟ್ರಂಪ್ ಈ ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ, ಇರಾನ್‌ನ ‘ಪರ್ಷಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ’ (PGSA) ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಲಸಂಧಿಯನ್ನು ಮುಚ್ಚಿರುವುದಾಗಿ ಬಾಂಬ್ ಸಿಡಿಸಿದೆ. ಅಮೆರಿಕ ಸೇನೆಯ ನಿರಂತರ ಉಗ್ರ ಮತ್ತು ಹಗೆತನದ ಧೋರಣೆಯಿಂದಾಗಿ ಹೊರ್ಮುಜ್ ಜಲಸಂಧಿಯ ಮೂಲಕ ಸದ್ಯಕ್ಕೆ ಯಾವುದೇ ಹಡಗುಗಳ ಸಂಚಾರ ಅಸಾಧ್ಯವಾಗಿದೆ. ಈ ಭಾಗದಲ್ಲಿ ಸಂಪೂರ್ಣ ಶಾಂತಿ ಮತ್ತು ಸ್ಥಿರತೆ ನೆಲೆಸುವವರೆಗೆ ಜಲಸಂಧಿ ಮುಚ್ಚಿರುತ್ತದೆ ಎಂದು ಇರಾನ್ ಸ್ಪಷ್ಟಪಡಿಸಿದೆ.

ಸಾರಿಗೆ ಅನುಮತಿಗಾಗಿ ಕೇವಲ ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಇರಾನ್ ಷರತ್ತು ವಿಧಿಸಿದೆ. ವಾರಾಂತ್ಯದಲ್ಲಿ ಇರಾನ್ ಜೊತೆಗಿನ ಕದನ ವಿರಾಮ (Ceasefire) ಅಂತ್ಯಗೊಂಡಿದೆ ಎಂದು ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಭಾರತ ಸೇರಿದಂತೆ ಜಗತ್ತಿಗೆ ಏಕೆ ಆತಂಕ?
ಹೊರ್ಮುಜ್ ಜಲಸಂಧಿಯು ಮಧ್ಯಪ್ರಾಚ್ಯದ (ಮಧ್ಯ ಏಷ್ಯಾ) ತೈಲ ಉತ್ಪಾದಕ ರಾಷ್ಟ್ರಗಳನ್ನು ಮತ್ತು ಜಾಗತಿಕ ಮಾರುಕಟ್ಟೆಯನ್ನು ಸಂಪರ್ಕಿಸುವ ಏಕೈಕ ಪ್ರಮುಖ ಜಲಮಾರ್ಗವಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲದ (Crude Oil) ಶೇಕಡಾ 20 ಕ್ಕಿಂತ ಹೆಚ್ಚು ಭಾಗ ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗಣೆಯಾಗುತ್ತದೆ. ಇರಾನ್ ಇದನ್ನು ಬಂದ್ ಮಾಡಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದ್ದು, ಭಾರತದ ಆರ್ಥಿಕತೆಯ ಮೇಲೂ ಇದು ಭಾರಿ ಪರಿಣಾಮ ಬೀರಲಿದೆ.

ಇದನ್ನೂ ಓದಿ: DEEPIKA PADUKONE: ವಿಮಾನ ನಿಲ್ದಾಣದಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಡಿಪ್ಪಿ, ವಿಡಿಯೋ ವೈರಲ್! 

ಹೆಚ್ಚಿನ ಸುದ್ದಿ

Change Language »
error: Content is protected !!