Thursday, July 16, 2026
Homeಕ್ರೈಂDONALD TRUMP : ಖಮೇನಿ ಅಂತ್ಯಕ್ರಿಯೆಗೆ 1 ವಾರ ಟೈಮ್ ಕೊಟ್ಟಿದ್ದೇ ನಾವು, ಯಾಕಂದ್ರೆ ನಾವು...

DONALD TRUMP : ಖಮೇನಿ ಅಂತ್ಯಕ್ರಿಯೆಗೆ 1 ವಾರ ಟೈಮ್ ಕೊಟ್ಟಿದ್ದೇ ನಾವು, ಯಾಕಂದ್ರೆ ನಾವು ‘ಒಳ್ಳೆಯವರು’: ಇರಾನ್ ಕಾಲೆಳೆದ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್ / ತೆಹರಾನ್: ಇಸ್ರೇಲ್ (Israel) ಮತ್ತು ಅಮೆರಿಕ (America) ಜಂಟಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Khamenei) ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇರಾನ್‌ನಲ್ಲಿ (Iran) ಆರಂಭವಾಗ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೌತ್ ಡಕೋಟಾದ ಪ್ರಸಿದ್ಧ ‘ಮೌಂಟ್ ರಶ್ಮೋರ್’ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ನಾವು ಇರಾನ್ ಅನ್ನು ಹಿಗ್ಗಾಮುಗ್ಗಾ ಜಜ್ಜಿದ್ದೇವೆ. ಅವರು ಈಗ ನಮ್ಮೊಂದಿಗೆ ಸಂಧಾನ ಮಾಡಿಕೊಳ್ಳಲು ತೀವ್ರವಾಗಿ ಹಪಹಪಿಸುತ್ತಿದ್ದಾರೆ. ನಾವು ತುಂಬಾ ಒಳ್ಳೆಯವರಾಗಿರುವ ಕಾರಣಕ್ಕಾಗಿಯೇ, ಅವರ ನಾಯಕನ ಅಂತ್ಯಕ್ರಿಯೆ ಮುಗಿಸಲು ಅವರಿಗೆ ಒಂದು ವಾರಗಳ ಕಾಲ ಬಿಡುವು (ಟೈಮ್) ನೀಡಿದ್ದೇವೆ ಎಂದು ಲೇವಡಿ ಮಾಡಿದ್ದಾರೆ. ಟ್ರಂಪ್ ಅವರ ಈ ಚುಚ್ಚುಮಾತಿಗೆ ಸಮಾವೇಶದಲ್ಲಿದ್ದ ಸಾರ್ವಜನಿಕರು ಜೋರಾಗಿ ಚಪ್ಪಾಳೆ ತಟ್ಟಿ, ನಗುತ್ತಾ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಕಳೆದ ಫೆಬ್ರವರಿ 28 ರಂದು ನಡೆದ ಯುದ್ಧದ ಆರಂಭಿಕ ಹಂತದಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ 37 ವರ್ಷಗಳ ಕಾಲ ಇರಾನ್ ಆಳಿದ್ದ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದರು.
ಈ ಭೀಕರ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೆ ಅವರ ಮಗಳು, ಅಳಿಯ, ಸೊಸೆ ಹಾಗೂ ಕರಳು ಕುಡಿಯಾಗಿದ್ದ ಮೊಮ್ಮಗಳು ಕೂಡ ಬಲಿಯಾಗಿದ್ದರು. ಇಸ್ಲಾಂ ಧರ್ಮದ ಸಂಪ್ರದಾಯದ ಪ್ರಕಾರ ಮರಣ ಹೊಂದಿದ 24 ಗಂಟೆಗಳ ಒಳಗಾಗಿ ದಫನ ಕಾರ್ಯ (ಅಂತ್ಯಕ್ರಿಯೆ) ನೆರವೇರಿಸಬೇಕಿರುತ್ತದೆ. ಆದರೆ ಭೀಕರ ಯುದ್ಧ ಮತ್ತು ತೀವ್ರ ಭದ್ರತಾ ಕಾರಣಗಳಿಂದಾಗಿ ಇರಾನ್ ಸರ್ಕಾರವು ಅಂತ್ಯಕ್ರಿಯೆಯನ್ನು ಮುಂದೂಡುತ್ತಾ ಬಂದಿತ್ತು.
ಕಳೆದ ತಿಂಗಳಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಂತರ ಕದನ ವಿರಾಮ ಏರ್ಪಟ್ಟ ಹಿನ್ನೆಲೆಯಲ್ಲಿ, ಸದ್ಯ ಐದು ತಿಂಗಳ ಬಳಿಕ ಈ ಅಧಿಕೃತ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಆರಂಭಗೊಂಡಿವೆ.

ತೆಹರಾನ್‌ನ ‘ಗ್ರಾಂಡ್ ಮೊಸಲ್ಲಾ’ ಪ್ರಾರ್ಥನಾ ಮಂದಿರದಲ್ಲಿ ಇರಿಸಲಾಗಿರುವ ಖಮೇನಿ ಅವರ ಪಾರ್ಥಿವ ಶರೀರಕ್ಕೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸೇರಿದಂತೆ ಪ್ರಮುಖ ರಾಜಕೀಯ ಹಾಗೂ ಮಿಲಿಟರಿ ನಾಯಕರು ಕಣ್ಣೀರಿಡುತ್ತಾ ಅಂತಿಮ ನಮನ ಸಲ್ಲಿಸಿದ್ದಾರೆ.

ಕಪ್ಪು ವಸ್ತ್ರ ಧರಿಸಿದ ಲಕ್ಷಾಂತರ ಬೆಂಬಲಿಗರು ತಮ್ಮ ಸಂಪ್ರದಾಯದಂತೆ ಎದೆ ಬಡಿದುಕೊಳ್ಳುತ್ತಾ ಅಳುತ್ತಿದ್ದಾರೆ. ಇರಾನ್‌ನ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ಸುಪ್ರೀಂ ಲೀಡರ್ ಆಗಿದ್ದ ಖಮೇನಿ ಅವರ ಪಾರ್ಥಿವ ಶರೀರವನ್ನು ಶಿಯಾ ಸಮುದಾಯದ ಪವಿತ್ರ ನಗರಗಳಾದ ಕ್ಯೂಮ್, ನಜಾಫ್ ಮತ್ತು ಕರ್ಬಲಾವಿಗೆ ಕೊಂಡೊಯ್ದು, ಜುಲೈ 9 ರಂದು ಇಮಾಮ್ ರೆಜಾ ಮಂದಿರದ ಬಳಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಮಣ್ಣು ಮಾಡಲಾಗುವುದು. ಈ ಮಹತ್ವದ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ಅಧಿಕೃತ ನಿಯೋಗಗಳು ತೆಹರಾನ್‌ಗೆ ಆಗಮಿಸಿವೆ.

ಇದನ್ನೂ ಓದಿ : ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಮೌಂಟ್ ರಶ್ಮೋರ್‌ನಲ್ಲಿ ಟ್ರಂಪ್ ಭಾಷಣ – VIDEO 

ಹೆಚ್ಚಿನ ಸುದ್ದಿ

Change Language »
error: Content is protected !!