Thursday, March 12, 2026
Homeworld newsDONALD TRUMP: ಈ ಟ್ರಂಪ್​ಗೆ ಏನಾಯ್ತು? ಅಮೆರಿಕ ಅಧ್ಯಕ್ಷರಿಗೆ ಕಾಡುತ್ತಿದ್ಯಾ ಚರ್ಮರೋಗ?

DONALD TRUMP: ಈ ಟ್ರಂಪ್​ಗೆ ಏನಾಯ್ತು? ಅಮೆರಿಕ ಅಧ್ಯಕ್ಷರಿಗೆ ಕಾಡುತ್ತಿದ್ಯಾ ಚರ್ಮರೋಗ?

ವಾಷಿಂಗ್ಟನ್ ಡಿಸಿ : ಇರಾನ್ ಜೊತೆಗಿನ ಅಮೆರಿಕದ ಯುದ್ಧ ಜೋರಾಗಿದೆ. ಇದ್ರ ಮಧ್ಯೆ ಡೊನಾಲ್ಡ್ ಟ್ರಂಪ್​​ರವ್ರ ಕುರಿತ ಹೊಸ ಸುದ್ದಿ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷರಿಗೆ ಚರ್ಮರೋಗ ಕಾಡುತ್ತಿದ್ಯಾ ಎಂಬ ಅನುಮಾನ ಮೂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅನಾರೋಗ್ಯದಿಂದ ನರಳುತ್ತಿದ್ದಾರೆ. ಅದನ್ನು ಟ್ರಂಪ್ ಕುಟುಂಬ ಹಾಗೂ ಅಮೆರಿಕ ಸರ್ಕಾರ ಗೌಪ್ಯವಾಗಿರಿಸಿವೆ. ದಿನದಿಂದ ದಿನಕ್ಕೆ ಅವರ ದೇಹದ ಆರೋಗ್ಯ ಹದಗೆಡುತ್ತಿದೆ ಎಂದು ಜಗತ್ತಿನಾದ್ಯಂತ ಹರಡಿರುವ ವದಂತಿಗಳು ಹರಡಿವೆ.

ಖಮೇನಿ ಹತ್ಯೆಯಿಂದ ಹಿಡಿದು, ವೆನೆಜುವೆಲಾದ ಅಧ್ಯಕ್ಷನನ್ನೇ ಬಂಧಿಸುವವರೆಗೂ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಸದ್ಯ ಇಸ್ರೇಲ್‌ ಜೊತೆಗೂಡಿ ಇರಾನ್‌ ವಿರುದ್ಧ ಯುದ್ಧದಲ್ಲಿ ತೊಡಗಿರುವ ಡೊನಾಲ್ಡ್‌ ಟ್ರಂಪ್‌ಗೆ ಚರ್ಮರೋಗ ಕಾಡುತ್ತಿದೆಯಾ ಅನ್ನೋ ಚರ್ಚೆ ಎದ್ದಿದೆ.

ಯಾಕೀ ಅನುಮಾನ?
ಟ್ರಂಪ್ ಕತ್ತಿನ ಬಲಭಾಗದಲ್ಲಿ ಕೆಂಪು ಬಣ್ಣದ ಚರ್ಮದ ದದ್ದುಗಳು ಕಾಣಿಸಿಕೊಂಡಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಇದು ಕಾಯಿಲೆಯೋ ಅಥವಾ ಚಿಕಿತ್ಸೆಯಿಂದಾದ ಗುರುತುಗಳೋ ಅನ್ನೋದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಚರ್ಮದ ಚಿಕಿತ್ಸೆಗಾಗಿ ಟ್ರಂಪ್‌ ‘ಮೊಮೆಟಾಸೋನ್’ ಕ್ರೀಮ್‌ ಬಳಸುತ್ತಿದ್ದರು. ಇದರ ಪರಿಣಾಮದಿಂದ ದದ್ದುಗಳು ಕಾಣಿಸಿಕೊಂಡಿವೆ. ಆದರೂ ಟ್ರಂಪ್‌ಗೆ ಅನಾರೋಗ್ಯ ಕಾಡುತ್ತಿದೆ ಎಂದು ಹೇಳಲಾಗ್ತಿದೆ. ಮೇಲ್ನೋಟಕ್ಕೆ ಇದು ವೈದ್ಯರು ಸೂಚಿಸಿದ ಕ್ರೀಮ್ ಬಳಕೆಯಿಂದಾಗಿ ಉಂಟಾಗಿದೆ ಎನ್ನಲಾಗುತ್ತಿದೆ. ಆದರೆ ಟ್ರಂಪ್ ಆಗಲಿ, ಅಮೆರಿಕ ಸರ್ಕಾರವಾಗಲೀ ಸ್ಪಷ್ಟನೆ ನೀಡಿಲ್ಲ.

10 ಕೆಜಿ ತೂಕ ಇಳಿಸಿಕೊಂಡಿದ್ದ ದೊಡ್ಡಣ್ಣ
ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಸುಂಕ ನೀತಿಗಳಿಂದ​ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಈಗಾಗಲೇ 78 ವರ್ಷ ವಯಸ್ಸಿನವರಾಗಿರುವ ಟ್ರಂಪ್​ ಆರೋಗ್ಯದ ಬಗ್ಗೆ ದೊಡ್ಡ ಅಪ್ಡೇಟ್​​ ಬಂದಿದೆ. ಟ್ರಂಪ್ ಅವರ ಕೊನೆಯ ದೈಹಿಕ ತಪಾಸಣೆಯ ನಂತರ ಅವರು ಸುಮಾರು 20 ಪೌಂಡ್‌ಗಳಷ್ಟು ಕಡಿಮೆಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಅಂದರೆ ಸರಿ ಸುಮಾರು 10 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕುವೈತ್‌ನ ರಾಯಭಾರ ಕಚೇರಿಗೆ ಬೀಗ ಜಡಿದ ಟ್ರಂಪ್
ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಮಧ್ಯೆ, ಇರಾನ್ ಮಾರಕ ಹೆಜ್ಜೆ ಇಟ್ಟಿದೆ. ಇಡೀ ಜಗತ್ತು ಭಯಪಡುವಂತೆ ಇರಾನ್ ಮಾಡಿದೆ. ಹೌದು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ. ಅಲ್ಲದೇ ಮಧ್ಯಪ್ರಾಚ್ಯದ ಸುನ್ನಿ ದೇಶಗಳ ಮೇಲೆ ಭೀಕರ ದಾಳಿ ಮಾಡುತ್ತಿದೆ. ಈ ದಾಳಿಯಿಂದ ಅಮೆರಿಕ ಬೆದರಿದೆ. ಕುವೈತ್‌ನ ರಾಯಭಾರ ಕಚೇರಿಗೆ ಬೀಗ ಹಾಕಿದೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದಿನ ಸೂಚನೆ ಬರುವವರೆಗೆ ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಮುಚ್ಚಲು ಅಮೆರಿಕ ನಿರ್ಧರಿಸಿದೆ. ಇರಾನ್‌ನಿಂದ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೋರ್ಡಾನ್, ಬಹ್ರೇನ್, ಇರಾಕ್, ಕತಾರ್ ಮತ್ತು ಕುವೈತ್‌ನಿಂದ ಅನಗತ್ಯ ಅಮೆರಿಕ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಲು ಅಮೆರಿಕ ವಿದೇಶಾಂಗ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ: ಅಮೆಜಾನ್ ಡೇಟಾ ಕೇಂದ್ರಗಳ ಮೇಲೆ ಇರಾನ್ ಡ್ರೋನ್ ದಾಳಿ- VIDEO

ಹೆಚ್ಚಿನ ಸುದ್ದಿ

Change Language »
error: Content is protected !!