Wednesday, August 19, 2026
Homeಟಾಪ್ ನ್ಯೂಸ್DONALD TRUMP : ಗಾಜಾ ಶಾಂತಿ ಸ್ಥಾಪನಾ ಮಂಡಳಿ ಸೇರಲು ಭಾರತಕ್ಕೆ ಟ್ರಂಪ್ ಆಹ್ವಾನ

DONALD TRUMP : ಗಾಜಾ ಶಾಂತಿ ಸ್ಥಾಪನಾ ಮಂಡಳಿ ಸೇರಲು ಭಾರತಕ್ಕೆ ಟ್ರಂಪ್ ಆಹ್ವಾನ

ನವದೆಹಲಿ: ಯುದ್ಧಾನಂತರದ ಗಾಜಾದಲ್ಲಿ(gaza) ಆಡಳಿತ ಮತ್ತು ಪುನರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಸ್ಥಾಪಿಸಲಾಗುವ “ಶಾಂತಿ ಮಂಡಳಿ”ಯ ಭಾಗವಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಾರತವನ್ನು( India) ಆಹ್ವಾನಿಸಿದ್ದಾರೆ.

ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ಒಂದು ಮುಖ್ಯ ಮಂಡಳಿ, ನಂತರ ಯುದ್ಧಪೀಡಿತ ಪ್ರದೇಶವನ್ನು ಆಳಲು ಉದ್ದೇಶಿಸಲಾದ ಪ್ಯಾಲೆಸ್ಟೀನಿಯನ್ ತಂತ್ರಜ್ಞರ ಸಮಿತಿ ಮತ್ತು ಸಲಹೆಗಳನ್ನು ಈಡಲು ಎರಡನೇ “ಕಾರ್ಯನಿರ್ವಾಹಕ ಮಂಡಳಿ” ಇರುತ್ತದೆ ಎಂದು ಶ್ವೇತಭವನ ಹೇಳಿತ್ತು.

ಈ ಶಾಂತಿ ಸ್ಥಾಪನಾ ಮಂಡಳಿ ರಚನೆಯು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿದೆ. ಈ ಸಮಿತಿಯು ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ಮಹತ್ವದ ಪಾತ್ರ ವಹಿಸಲಿದೆ. ಭಾರತದ ಜೊತೆಗೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾದ ನಾಯಕರನ್ನು ಈ ಸಮಿತಿಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

ಈ ಶಾಂತಿ ಸ್ಥಾಪನಾ ಮಂಡಳಿ ನ ಕರಡು ನಿಯಮಾವಳಿಯ ಪ್ರಕಾರ, ಮಂಡಳಿಯಲ್ಲಿನ ಸದಸ್ಯತ್ವವು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಮುಂದುವರೆಯಬೇಕಾದರೆ, ಪ್ರತಿ ದೇಶವು 1 ಶತಕೋಟಿ ಡಾಲರ್ ನಗದು ರೂಪದಲ್ಲಿ ಕೊಡುಗೆ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ಕರಡು ನಿಯಮಾವಳಿಯನ್ನು ಸುಮಾರು 60 ದೇಶಗಳಿಗೆ ಕಳುಹಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಯುದ್ಧ ಪ್ರಾರಂಭವಾದ ನಂತರ ಈಜಿಪ್ಟ್ ಮೂಲಕ ಗಾಜಾಗೆ ಮಾನವೀಯ ನೆರವು ಕಳುಹಿಸಿದ ಮೊದಲ ದೇಶಗಳಲ್ಲಿ ಭಾರತವೂ ಸೇರಿತ್ತು.

ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಗಾಜಾದ ಭವಿಷ್ಯಕ್ಕಾಗಿ ಪಾಕಿಸ್ತಾನವು ಇಸ್ರೇಲ್‌ಗೆ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಉಲ್ಲೇಖಿಸಿದ್ದರು.

ಜನವರಿ 15 ರಂದು ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯ 20 ಅಂಶಗಳ ಭಾಗವಾಗಿ ರಚಿಸಲಾದ ಈ ಮಂಡಳಿಯನ್ನು ಭವಿಷ್ಯದಲ್ಲಿ ಇತರ ಜಾಗತಿಕ ಸಂಘರ್ಷಗಳನ್ನು ಪರಿಹರಿಸಲು ಕೂಡಾ ಬಳಸಲಾಗುತ್ತದೆ.

ಇದನ್ನೂ ಓದಿ ಬೇರೆಯವರ ನೊಬೆಲ್‌ ನಿಮಗೆ ಬೇಕೆ ಎಂದಿದ್ದಕ್ಕೆ ಮತ್ತೆ ಯುದ್ಧ ನಿಲ್ಲಿಸಿದ ಪುಂಗಿ ಊದಿದ ಟ್ರಂಪ್‌!- VIDEO:

ಹೆಚ್ಚಿನ ಸುದ್ದಿ

Change Language »
error: Content is protected !!