ದೊಡ್ಡಬಳ್ಳಾಪುರ: ಪ್ರೀತಿ (Love) ಹೆಸರಲ್ಲಿ ಮೋಸ ಮಾಡುವವರು ಬಹಳಷ್ಟು ಜನರಿದ್ದಾರೆ. ಅದರಲ್ಲೂ ಕೆಲವರಂತೂ ಜೀವ ತೆಗೆದಿರುವ ಘಟನೆ ನಡೆದಿದೆ. ಇದೀಗ ಪ್ರೀತಿಸಿ ಗರ್ಭಿಣಿ (Pregnant) ಮಾಡಿದ ಯುವಕ, ಪ್ರೇಯಸಿಯನ್ನ ಕೊಲೆ ಮಾಡಲು ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆದಿದೆ.
ಪ್ರಿಯಕರ ಹಾಗೂ ಕುಟುಂಬಸ್ಥರಿಂದ ಕೊಲೆ ಯತ್ನ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮನೆಯಲ್ಲಿನ ಕೋಣೆಗೆ ಬೆಂಕಿ ಹಚ್ಚಿ ಬೆಂಕಿಗೆ ಮಹಿಳೆಯನ್ನ ಹಾಕಲು ಯತ್ನಿಸಿದ್ದಾರೆ ಎಂದು ಮಹಿಳೆ ಪ್ರಿಯಕರ ಹಾಗೂ ಹಾಗೂ ಆತನ ಕುಟುಂಬಸ್ಥರ ಮೇಲೆ ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಳೆದ ಎಂಟು ವರ್ಷಗಳಿಂದೆ ಜಿಮ್ ಟ್ರೈನರ್ ಗೌತಮ್ ಎನ್ನುವ ವ್ಯಕ್ತಿಯನ್ನ ಮಹಿಳೆಯ ಪ್ರೀತಿಸುತ್ತಿದ್ದು, ಪ್ರೀತಿಸಿ ಗರ್ಭಿಣಿ ಮಾಡಿದ ನಂತರ ಮದುವೆಯಾಗಲ್ಲ ಅಂತ ಮಹಿಳೆಗೆ ಕೈ ಕೊಟ್ಟಿದ್ದ. ಅಲ್ಲದೇ, ಬೇರೆ ಮದುವೆ ಸಹ ಆಗಿದ್ದ. ಇದೇ ವಿಚಾರವಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿ 376 ಕೇಸ್ ಹಾಕಿದ್ದರು ಎನ್ನಲಾಗಿದೆ.
ಮನೆಯಲ್ಲಿ ಕಿರುಕುಳ ನೀಡಿದ್ದ ಪ್ರಿಯಕರ
ಪ್ರಿಯಕರನ ಮೇಲೆ ದೂರು ನೀಡಿದ್ದ ಕಾರಣ ಕೇಸ್ ವಾಪಸ್ ಪಡೆಯುವಂತೆ ಮಹಿಳೆಯನ್ನ ಮನೆಗೆ ಕರೆದುಕೊಂಡು ಹೋಗಿ ರಾಜಿ ಮಾಡಲು ಗೌತಮ್ ಹಾಗೂ ಕುಟುಂಬಸ್ಥರು ಪ್ರಯತ್ನ ಮಾಡಿದ್ದಾರೆ. ರಾಜಿ ಹೆಸರಲ್ಲಿ ಕರೆದುಕೊಂಡು ಹೋಗಿ 20 ದಿನಗಳಿಂದ ಮನೆಯಲ್ಲಿಟ್ಟುಕೊಂಡು ಮಹಿಳೆ ಮತ್ತು ಮತ್ತು ಮಗುವಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಕಿರುಕುಳದ ಜೊತೆಗೆ ಉರಿಯುತ್ತಿದ್ದ ಬೆಂಕಿಗೆ ಮಹಿಳೆಯನ್ನ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ, ಪ್ರಿಯಕರನ ಜೊತೆ ಸೇರಿ ಜೀವ ತೆಗೆದ ಪತ್ನಿ
ಇನ್ನು ಮನೆ ಹೊತ್ತಿ ಉರಿಯುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಆಗಿದ್ದು, ಮಹಿಳೆಯ ಕುಟುಂಬಸ್ಥರ ಮೇಲು ಗೌತಮ್ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವರ್ಷಕ್ಕೊಂದು ಯುವತಿಯ ಜೊತೆ ಲೈಂಗಿಕ ಸಂಪರ್ಕ ಬೆಳಸಿ ಗೌತಮ್ ಮೋಸ ಮಾಡಿರುವ ಆರೋಪ ಸಹ ಮಹಿಳೆ ಮಾಡಿದ್ದು, ನಮಗೆ ನ್ಯಾಯ ಕೊಡಿಸಿ ಅಂತ ಹಲ್ಲೆಗೊಳಗಾಗಿರುವ ಮಹಿಳೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಇನ್ನು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಗಂಡನನ್ನ ಕೊಲೆ ಮಾಡಿದ ಪತ್ನಿ
ಪತ್ನಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣದಿಂದ ಪ್ರಿಯಕರನ ಜೊತೆ ಸೇರಿ ಪತಿಯನ್ನ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವಿಜಯ್ ಪತ್ನಿ ಗುಡಿಯಾ ಚೌಹಾಣ್ ತನ್ನ ಪ್ರೇಮಿ ಮೋನು ವಿಶ್ವಕರ್ಮ ಜೊತೆ ಸೇರಿ ಗಂಡನನ್ನ ಕೊಲ್ಲಲು ಸಂಚು ರೂಪಿಸಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಸುಮಾರು ಎರಡು ವಾರಗಳ ಹಿಂದೆ ಕೊಲೆ ಮಾಡಿದ ಆರೋಪಿಗಳು, ಮನೆಯಲ್ಲಿಯೇ ಶವವನ್ನ ಹೂತು ಹಾಕಿದ್ದಾರೆ. ಅಲ್ಲದೇ, ಮನೆಗೆ ಹೊಸ ಟೈಲ್ಸ್ ಸಹ ಹಾಕಿಸಿದ್ದು, ಅದರ ಅಡಿಯಲ್ಲಿ ಶವವನ್ನ ಹೂತು ಹಾಕಲಾಗಿತ್ತು. ಯಾರಿಗೂ ಟೈಲ್ಸ್ ಕೆಳಗೆ ಏನಿದೆ ಎಂಬುದರ ಬಗ್ಗೆ ಸಣ್ಣ ಅನುಮಾನ ಸಹ ಬರದ ಹಾಗೆ ನೋಡಿಕೊಳ್ಳಲಾಗಿತ್ತು. ಇನ್ನು 8 ವರ್ಷದ ಮಗುವಿನ ಜೊತೆ ಗುಡಿಯಾ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದಳು.