ನವದೆಹಲಿ: ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿದ್ದ ಅಮೆರಿಕ- ಇರಾನ್ ಸಂಘರ್ಷಕ್ಕೆ ಸದ್ಯ ಕದನ ವಿರಾಮ ಘೋಷಣೆ ಆಗಿದೆ. ಈ ವಿಚಾರದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಮಾತನಾಡಿರುವ ಡಿಎಂಕೆ ರಾಜ್ಯಸಭಾ ಸಂಸದೆ ರಾಜಿತಿ ಸಲ್ಮಾ (Rajathi Salma) ಕೇಂದ್ರ ಸರ್ಕಾರವನ್ನ ಅಣಕಿಸಿದ್ದಾರೆ.
ಬಡ, ವಿಶ್ವಗುರು, ಸಂಘಿಗಳೇ ಹೇಗೆ ಸಹಿಸಿಕೊಳ್ತೀರಿ?
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾಮ ಮಧ್ಯಸ್ಥಿತಿಯಿಂದ ಅಮೆರಿಕ ಹಾಗೂ ಇರಾನ್ ನಡುಎವ ಕದನ ವಿರಾಮ ಘೋಷಣೆ ಆಗಿದೆ, ಯುದ್ಧ ನಿಂತು ಹೋಗಿದೆ. ಬಡ ವಿಶ್ವಗುರು! ಸಂಘಿಗಳೇ ನಿಮಗೆ ಇದನ್ನ ಸಹಿಸಿಕೊಳ್ಳಲು ಆಗುತ್ತಾ? ಹೇಗೆ ಸಹಿಸಿಕೊಳ್ತೀರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆರ್‌ಎಸ್‌ಎಸ್, ಬಿಜೆಪಿ ಹಾಗೂ ಮೋದಿಯನ್ನ ಟೀಕೆ ಮಾಡಿದ್ದಾರೆ. ಇನ್ನು ಸಲ್ಮಾ ಅವರ ಈ ಪೋಸ್ಟ್ ಬಗ್ಗೆ ತಮಿಳುನಾಡಿನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇರಾನ್, ಯುಎಸ್ ಯುದ್ದ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ – 56 ಇಂಚಿನ ಎದೆ ಎಲ್ಲೋಯ್ತು ಎಂದ ಕಾಂಗ್ರೆಸ್!
ಅಮೆರಿಕ ಮತ್ತು ಇರಾನ್ (US iran War) ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮವನ್ನು ಜಗತ್ತು ಸ್ವಾಗತಿಸುತ್ತಿದ್ದರೂ, ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದು ಭಾರತದ ರಾಜತಾಂತ್ರಿಕತೆಗೆ ಬಿದ್ದ ದೊಡ್ಡ ಹೊಡೆತ ಎಂದು ಕಾಂಗ್ರೆಸ್ (Congress) ಹಿರಿಯ ನಾಯಕ ಜೈರಾಮ್ ರಮೇಶ್ (Jairam Ramesh) ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವಲ್ಲಿ ಪ್ರಧಾನಿ ಮೋದಿ (Pm Modi) ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದ ಇಡೀ ಪ್ರಕ್ರಿಯೆಯಲ್ಲಿ ಭಾರತದ ಸ್ಥಾನಮಾನಕ್ಕೆ ಪೆಟ್ಟು ಬಿದ್ದಿದೆ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನವು ಇಂದು ಎರಡು ಬಲಾಢ್ಯ ದೇಶಗಳ ನಡುವೆ ಶಾಂತಿ ಸಂಧಾನ ಮಾಡುವ ಪಾತ್ರ ವಹಿಸಿರುವುದು ಭಾರತದ ವಿದೇಶಾಂಗ ನೀತಿಯ ಸೋಲನ್ನು ತೋರಿಸುತ್ತದೆ.
ಈ ಹಿಂದೆ ಮುಂಬೈ ದಾಳಿಯ ನಂತರ ಡಾ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಒಂಟಿಯಾಗಿಸಿದ್ದರೋ, ಅಂತಹ ರಾಜತಾಂತ್ರಿಕ ಚಾತುರ್ಯವನ್ನು ತೋರಲು ಮೋದಿಯವರಿಂದ ಸಾಧ್ಯವಾಗಿಲ್ಲ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ಇಸ್ರೇಲ್ ಭೇಟಿ ಮುಗಿಸಿದ ಕೇವಲ ಎರಡು ದಿನಗಳ ನಂತರ ಇರಾನ್‌ನಲ್ಲಿ ಉನ್ನತ ಅಧಿಕಾರಿಗಳ ಹತ್ಯೆಯೊಂದಿಗೆ ಸಂಘರ್ಷ ಆರಂಭವಾಗಿತ್ತು. ಈ ಬೆಳವಣಿಗೆಗಳು ಭಾರತದ ಜಾಗತಿಕ ಖ್ಯಾತಿಗೆ ಕಳಂಕ ತಂದಿವೆ ಎಂದು ರಮೇಶ್ ದೂರಿದ್ದಾರೆ.
ಇದನ್ನೂ ಓದಿP: ಇರಾನ್ ಸರ್ವನಾಶದ ಹೇಳಿಕೆ, ಟ್ರಂಪ್‌ಗೆ ಅಮೆರಿಕಾದಲ್ಲೇ ಶುರುವಾಯ್ತು ವಿರೋಧ!