Monday, April 21, 2025
Homeಟಾಪ್ ನ್ಯೂಸ್DK VS HDK : ಹೆಚ್ಡಿಕೆ DNA ಯಲ್ಲೇ ದ್ವೇಷ ರಾಜಕಾರಣ - ರಾಮನಗರ ಹೆಸರು...

DK VS HDK : ಹೆಚ್ಡಿಕೆ DNA ಯಲ್ಲೇ ದ್ವೇಷ ರಾಜಕಾರಣ – ರಾಮನಗರ ಹೆಸರು ಬದಲಾವಣೆ ಶತಃಸಿದ್ಧ : ಡಿಕೆಶಿ ಘರ್ಜನೆ

ಬೆಂಗಳೂರು : ದ್ವೇಷ ರಾಜಕಾರಣ ಅನ್ನೋದು ಕುಮಾರಸ್ವಾಮಿ ಡಿಎನ್ಎ ನಲ್ಲಿದ್ದು, ಈ ಹಿಂದೆ ಅನೇಕ ಬಾರಿ ಅದು ಸಾಬೀತಾಗಿದೆ. ನಮ್ಮ ವಿಚಾರಕ್ಕೆ ಹೆಚ್ ಡಿಕೆ ಬರದಿದ್ದರೆ ಒಳ್ಳೇದು ಎಂದು ಡಿಸಿಎಂ ಡಿಕೆಶಿ ಘರ್ಜಿಸಿದ್ದಾರೆ.

ಬೆಂಗಳೂರಲ್ಲಿ ಮಾತಾಡಿದ ಅವರು, ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವಿಗೂ ನಮಗೂ ಸಂಬಂಧ ಇಲ್ಲ. ಕೋರ್ಟ್ ಆದೇಶದಂತೆ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಸುಖಾಸುಮ್ಮನೆ ನಮ್ಮಮೇಲೆ ಆರೋಪ ಮಾಡೋದನ್ನು ನಿಲ್ಲಿಸಿ ಎಂದು ಕಿಡಿಕಾರಿದರು.

ಸಾಮಾಜಿಕ ಹೋರಾಟಗಾರ ಹಿರೇಮಠ್ ಕುಮಾರಸ್ವಾಮಿ ಮೇಲೆ ಕೇಸ್ ಹಾಕಿದ್ದಾರೆ. ಆ ಕೇಸ್ ಆಧಾರಿತ ನ್ಯಾಯಾಲಯದ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದರು.
ಬಳ್ಳಾರಿ ಅದಿರಿಗೂ ನನಗೂ ಸಂಬಂಧವೇ ಇರಲಿಲ್ಲ ಆದರೂ ಕುಮಾರಸ್ವಾಮಿ ನನ್ನ ಹಾಗೂ ತಂಗಿ ತಮ್ಮನ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕಿಂತಲೂ ದ್ವೇಷದ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆಯ ಹೆಸರು ಬದಲಾಗದಂತೆ ಯಾರ ಬಳಿ ಏನು ಒತ್ತಡ ತರಲಾಯ್ತು ಎಂಬುದು ಗೊತ್ತಿದೆ. ಶತಾಯಗತಾಯ ಹೆಸರು ಬದಲಾವಣೆ ಮಾಡುತ್ತೆವೆ. ಕನಕಪುರ , ಚನ್ನ ಪಟ್ಟಣ , ಮಾಗಡಿ ಜನರು ಬದುಕಬೇಕು ಎಂದು ಆಸೆ ಪಡೋದ್ರಲ್ಲಿ ತಪ್ಪೇನಿದೆ..? ಎಂದು ಡಿಕೆಶಿ ಪ್ರಶ್ನಿಸಿದರು.

ಹೆಚ್ಚಿನ ಸುದ್ದಿ

error: Content is protected !!