ಸರಳ ರಾಜಕಾರಣಿ ಸಜ್ಜನ ವ್ಯಕ್ತಿ ಮಾಜಿ ಸಂಸದ ಆರ್ ಧೃವನಾರಾಯಣ್ ನಿಧನ ನನಗೆ ಆಘಾತ ತಂದಿದೆ ಎಂದು ಗೆಳೆಯನನ್ನು ನೆನೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕಿದ್ರು
‘ಕಾಂಗ್ರೆಸ್ ಪಕ್ಷ ಹಾಗೂ ರಾಜಕಾರಣದ ಪರಿವಾರಕ್ಕೆ ಧೃವನಾರಾಯಣ ಅವರ ಅಗಲಿಕೆ ದೊಡ್ಡ ಆಘಾತ ತಂದಿದೆ. ಭಗವಂತ ಯಾಕೆ ಇಷ್ಟು ಕ್ರೂರಿಯಾಗಿದ್ದಾನೆ ಎಂದು ತಿಳಿಯುತ್ತಿಲ್ಲ. ಧೃವನಾರಾಯಣ ಅವರು ಅಜಾತ ಶತ್ರು. ಕಾಂಗ್ರೆಸ್ ಪಕ್ಷಕ್ಕೆ ಧೃವತಾರೆಯಾಗಿ ಸಮಾಜದ ಎಲ್ಲ ಸಮಾಜದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದ ಸರಳ ನಾಯಕರು.
ತಮಗೆ ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿಭಾಯಿಸಿ ಪಕ್ಷಕ್ಕೆ ನಿಷ್ಠೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಇದ್ದರು. ನಮ್ಮ ಕಾರ್ಯಾಧ್ಯಕ್ಷರಾಗಿ ಕೋವಿಡ್ ಸಮಯದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ, ಅವರ ಬದ್ಧತೆ ಅವಿಸ್ಮರಣೀಯ.
ನನ್ನ ಹಾಗೂ ಧೃವನಾರಾಯಣ ಅವರ ಸ್ನೇಹವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ನನಗೆ ಕೇವಲ ಕಾರ್ಯಾಧ್ಯಕ್ಷರಾಗಿರಲ್ಲಿಲ್ಲ. ನನ್ನ ಸಹೋದರನಂತೆ ಕುಟುಂಬದ ಸದಸ್ಯರಾಗಿದ್ದರು. ನನ್ನ ರಾಜಕೀಯ ಪಯಣದಲ್ಲಿ ಧೃವನಾರಾಯಣ ಅವರು ನನ್ನ ಜತೆ ಹೆಜ್ಜೆ ಹಾಕಿದ್ದರು ಎಂದು ಅವರನ್ನು ಸ್ಮರಿಸಿದ್ರು
ಧೃವ ನಾರಾಯಣ್ ನಿಧನದಿಂದಾಗಿ ಇಡೀ ಕಾಂಗ್ರೆಸ್ ಕುಟುಂಬಕ್ಕೆ ನಷ್ಟ ಆಗಿದೆ. ಸಂಭಾವಿ ರಾಜಕಾರಣಿ, ಮಾನವೀಯ, ಸ್ನೇಹ, ಪ್ರೀತಿ ಯಾರನ್ನು ನೋವಿಸಬಾರದು ಅಂತ ಗುಣ ಇತ್ತು. ಎಲ್ಲಾ ಸಮಾಜ, ವರ್ಗದವರು ಪ್ರೀತಿಯಿಂದ ನೋಡುತ್ತಿದ್ದರು. ಅನೇಕ ಬಾರಿ ನನಗೆ ಸಮಾಧಾನ ಮಾಡಿದ್ದರು. ನಮಗೆ ದೊಡ್ಡ ಶಕ್ತಿ ಆಗಿದ್ದರು. ಅವರು ನನ್ನ ಕಾರ್ಯಾಧ್ಯಕ್ಷ ಅಲ್ಲ. ನನ್ನ ಕುಟುಂಬವಾಗಿದ್ದರು. ನಮ್ಮ ಪಕ್ಷ ಕಾರ್ಯಕರ್ತರಿಗೆ ದೊಡ್ಡ ಆಸ್ತಿ ಆಗಿದ್ದರು. ಅವರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಿಳಿಸಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆರವರು ಫೋನ್ ಮಾಡಿದ್ದರು. ಅವರಿಗೂ ನಂಬೋದಕ್ಕೆ ಆಗ್ತಿಲ್ಲ. ನಮ್ಮ ಹೃದಯ ಗೆದ್ದವರು. ನನ್ನ ಸ್ನೇಹಿತ, ಸಹೋದರರಾಗಿದ್ದವರನ್ನು ಇಂದು ನಾನು ಕಳೆದುಕೊಂಡಿದ್ದೇನೆ ಎಂದು ಕಣ್ಣೀರು ಹಾಕಿದ್ರು