Wednesday, August 19, 2026
Homeಟಾಪ್ ನ್ಯೂಸ್ಎಲೆಕ್ಷನ್ ಟೆನ್ಷನ್ ಮಧ್ಯೆ ಡಿಕೆಶಿ‌ ಆಟೋ ರೈಡ್!

ಎಲೆಕ್ಷನ್ ಟೆನ್ಷನ್ ಮಧ್ಯೆ ಡಿಕೆಶಿ‌ ಆಟೋ ರೈಡ್!

ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕುಟುಂಬ ಸಮೇತರಾಗಿ‌ ಇಂದು ಸ್ವಗ್ರಾಮದಲ್ಲಿ ಮತದಾನ ಹಕ್ಕು ಚಲಾಯಿಸಿದರು. ಮತದಾನ‌ ಕೇಂದ್ರದಿಂದ‌ ಹೊರ ಬಂದು ಆಟೋ ಚಲಾಯಿಸಿ ಡಿಕೆಶಿ ಎಲ್ಲರ‌ ಗಮನ‌ಸೆಳೆದಿದ್ದಾರೆ.
ಚುನಾವಣೆ ಹಿನ್ನೆಲೆ ಡಿಕೆಶಿ ಮತದಾನ ಮಾಡಲು ಸ್ವಗ್ರಾಮವಾದ ದೊಡ್ಡಾಲನಹಳ್ಳಿಗೆ ಬಂದಿದ್ದರು. ಮತದಾನ ಮಾಡಿದ ಬಳಿಕ ಅವರು ಆಟೋ ಹತ್ತಿ ತಾವೇ ಕೆಲ ದೂರದ ವರೆಗೆ ಆಟೋವನ್ನು ಓಡಿಸಿದ್ದಾರೆ.
ಸ್ವಗ್ರಾಮದಲ್ಲಿ ಆಟೋ ಓಡಿಸಿ ಡಿಕೆಶಿ ಖುಷಿ ಪಟ್ಟರೆ, ಇದೇ ವೇಳೆ ಗ್ರಾಮಸ್ಥರು ಶಿವಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!