ವಿಜಯಪುರ: ರಾಜ್ಯದಲ್ಲಿ ಸಿಎಂ ಕುರ್ಚಿ ಪ್ರಹಸನ (CM Change row) ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಮಧ್ಯೆ ವಿಜಯಪುರದಲ್ಲಿ (Vijayapura) ಡಿಕೆಶಿ (DK Shivakumar) ಆಡಿದ ಮಾತುಗಳು ತೀವ್ರ ಚರ್ಚೆ ಹುಟ್ಟುಹಾಕಿದೆ. ಒಂದು ಮರಕ್ಕೆ ಬೇರು ಎಷ್ಟು ಮುಖ್ಯವೋ,ಹಾಗೇ ಒಬ್ಬ ಮನುಷ್ಯನಿಗೆ ನಂಬಿಕೆ ಕೂಡ ಬಹಳ ಮುಖ್ಯ. ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು’ ಎಂದು ಡಿಕೆ ಮಾರ್ಮಿಕವಾಗಿ ಮಾತನಾಡಿದ್ದರು. ಈ ವಿಚಾರ ಇದೀಗ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ: ಹೆಚ್ಡಿಕೆ ಲೇವಡಿ
ಈ ವಿಡಿಯೋ ಪೋಸ್ಟ್ ಮಾಡಿರುವ ಬಿಜೆಪಿ,
ಸಿಎಂ ಸಿದ್ದರಾಮಯ್ಯನವರೇ, ಇಷ್ಟು ದಿನ ‘ಕೊಟ್ಟ ಮಾತು’ ನೆನಪಿಸುತ್ತಿದ್ದ ಡಿಕೆ ಶಿವಕುಮಾರ್ ಅವರಿಗೆ ಈಗ ತಾಳ್ಮೆ ಕಟ್ಟೆ ಒಡೆದಂತಿದೆ! ಗೌರವವಾಗಿ ಕುರ್ಚಿ ಬಿಟ್ಟು ಹೋಗದಿದ್ದರೆ, ಕಳುಹಿಸಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆ ರವಾನೆಯಾಗಿದೆ ಜೋಕೆ! ಎಂದು ಬಿಜೆಪಿ ವ್ಯಂಗ್ಯವಾಡಿದೆ ಮತ್ತು ಕಾಂಗ್ರೆಸ್ ಕುರ್ಚಿ ಕಾಳಗ – 2ನೇ ಆವೃತ್ತಿಗೆ ನಿರೀಕ್ಷಿಸಿ…
ಸಂಕ್ರಾಂತಿಯ ನಂತರ ಎಂದು ಬಿಜೆಪಿ ಪೋಸ್ಟ್ ಮಾಡಿದೆ.
'@siddaramaiah ನವರೇ, ಇಷ್ಟು ದಿನ 'ಕೊಟ್ಟ ಮಾತು' ನೆನಪಿಸುತ್ತಿದ್ದ @DKShivakumar ಅವರ ತಾಳ್ಮೆ ಈಗ ಕಟ್ಟೆ ಒಡೆೆದಂತಿದೆ!
"ಗೌರವವಾಗಿ ಕುರ್ಚಿ ಬಿಟ್ಟು ಹೋಗದಿದ್ದರೆ, ಕಳುಹಿಸಬೇಕಾಗುತ್ತದೆ" ಎಂಬ ಪರೋಕ್ಷ ಎಚ್ಚರಿಕೆ ರವಾನೆಯಾಗಿದೆ ಜೋಕೆ!
ಕಾಂಗ್ರೆಸ್ ಕುರ್ಚಿ ಕಾಳಗ – 2ನೇ ಆವೃತ್ತಿಗೆ ನಿರೀಕ್ಷಿಸಿ…
ಸಂಕ್ರಾಂತಿಯ ನಂತರ!”**… pic.twitter.com/3M9UHqzH6T— BJP Karnataka (@BJP4Karnataka) January 10, 2026
ಜ.9 ರಂದು ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಬುದ್ಧಿ ಇದ್ದವರು ಯುದ್ಧ ಗೆಲ್ಲುತ್ತಾರೆ. ಗುಣ ಇದ್ದವರು ಹೃದಯವನ್ನು ಗೆಲ್ಲುತ್ತಾರೆ. ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ ಎಂದು ಡಿಕೆಶಿ ಪಂಚಿಂಗ್ ಲೈನ್ ಹೇಳಿದ್ದರು.