ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಜೆ ಸರಿಯಾಗಿ 4:05 ಗಂಟೆಗೆ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಅವರೊಂದಿಗೆ ನೂತನ ಸಚಿವರ ದಂಡೂ ಕೂಡ ಪ್ರಮಾಣವಚನ ಸ್ವೀಕರಿಸಿದೆ
ಸಾಂಪ್ರದಾಯಿಕ ರೇಷ್ಮೆ ಉಡುಗೆಯಲ್ಲಿ ಡಿಕೆಶಿ ಮಿಂಚಿಂಗ್!
ತಮ್ಮ ಸುದೀರ್ಘ ರಾಜಕೀಯ ಜೀವನದ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ದಿನದಂದು ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದಾರೆ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸುಸಂದರ್ಭದಲ್ಲಿ ಅವರು ಅಪ್ಪಟ ಕನ್ನಡಿಗನಾಗಿ ರೇಷ್ಮೆ ಪಂಚೆ, ರೇಷ್ಮೆ ಜುಬ್ಬ ಹಾಗೂ ರೇಷ್ಮೆಯ ಶಲ್ಯ ಧರಿಸಿ ರಾಜ ಗಾಂಭೀರ್ಯದೊಂದಿಗೆ ವೇದಿಕೆಯ ಮೇಲೆ ಕಾಣಿಸಿಕೊಂಡರು
ವೇದಿಕೆ ಏರುವ ಮುನ್ನ ತಾಯಿಯ ಪಾದಕ್ಕೆ ನಮಸ್ಕರಿಸಿದ ಡಿಕೆಶಿ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ಡಿ.ಕೆ. ಶಿವಕುಮಾರ್ ಅವರು ಹೆತ್ತ ತಾಯಿಯ ಆಶೀರ್ವಾದ ಪಡೆದಿದ್ದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ತಾಯಿ ಗೌರಮ್ಮ ಅವರ ಪಾದಗಳಿಗೆ ಭಕ್ತಿಯಿಂದ ಪ್ರಣಾಮ ಮಾಡಿ ಶಿರಬಾಗಿದ್ದ ಡಿಕೆಶಿ, ತಾಯಿಯ ಮಮತೆಯ ಹರಕೆಯನ್ನು ಪಡೆದುಕೊಂಡರು.
ತಮ್ಮ ಮಗ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆಗೇರುತ್ತಿರುವ ಈ ಪರಮ ಸುಖದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ಅವರು ಆನಂದಬಾಷ್ಪ ಸುರಿಸುತ್ತಾ ಮಗನಿಗೆ ಮುತ್ತೈದೆಯರಿಂದ ಆರತಿ ಎತ್ತಿಸಿ, ಸಿಹಿ ತಿನ್ನಿಸಿ, ನಾಡಿನ ಜನತೆಗೆ ಒಳ್ಳೆಯದು ಮಾಡುವ ಶಕ್ತಿ ಸಿಗಲಿ ಎಂದು ಮನಸಾರೆ ಹರಸಿದ್ದಾರೆ. ಈ ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಕ್ಷಣಕ್ಕೆ ಇಡೀ ಶಿವಕುಮಾರ್ ಕುಟುಂಬವೇ ಸಾಕ್ಷಿಯಾಗಿತ್ತು.
ಪ್ರಮಾಣ ವಚನಕ್ಕೂ ಮುನ್ನ ದೊಡ್ಡಗೌಡರ ಮನೆಗೆ ಹೋಗಿ ಆಶೀರ್ವಾದ ಪಡೆದ ಡಿಕೆಶಿ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (Cm Post) ಅಧಿಕಾರ ವಹಿಸಿಕೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ, ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ (Dk Shivakumar) ಅವರು ಮತ್ತೊಂದು ಅಭೂತಪೂರ್ವ ರಾಜಕೀಯ ಸೌಹಾರ್ದತೆಯ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭೇಟಿಯ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಯಾರೂ ಊಹಿಸದ ರೀತಿಯಲ್ಲಿ ಹಿರಿಯ ಮುತ್ಸದ್ದಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಅವರು ನಡೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದರು. ದಶಕಗಳ ಹಿಂದೆ ಕನಕಪುರ ಮತ್ತು ಸಾತನೂರು ಕ್ಷೇತ್ರಗಳಲ್ಲಿ ತಮ್ಮ ರಾಜಕೀಯ ಜೀವನದ ಮೊದಲ ಎದುರಾಳಿಯಾಗಿದ್ದ ಗೌಡರ ಮನೆಗೆ ನಡೆದುಕೊಂಡೇ ಹೋದ ಡಿಕೆಶಿ, ಭಾರತೀಯ ರಾಜಕಾರಣದ ಅತ್ಯಂತ ಹಿರಿಯ ನಾಯಕನಿಗೆ ಗೌರವ ಸಲ್ಲಿಸಿದರು.
ಇದನ್ನೂ ಓದಿ: ಬದುಕಿನಲ್ಲಿ ಗೆಲ್ಲಲು ಧರ್ಮರಾಯನ ಧರ್ಮ, ಕೃಷ್ಣನ ತಂತ್ರ ಇರಬೇಕು.. ಇದು ಡಿಕೆಶಿಯ ಮಹಾಭಾರತ ಸೂತ್ರ!