ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಭರ್ಜರಿಯಾಗಿ ನಡೆಯುತ್ತಿದೆ. ಶ್ರೀರಂಗಪಟ್ಟಣದ ಬಾಬುರಾಯನ ಕೊಪ್ಪಲಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿ, ರೋಡ್ ಷೋ ನಡೆಸಿದ್ದಾರೆ.
ಈ ವೇಳೆ, ಕನಕಪುರದ ಬಂಡೆ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಡಿಕೆಶಿಗೆ ಅವರ ಅಭಿಮಾನಿಗಳು ಬಂಡೆಗಳ ಪ್ರತಿಕೃತಿ ಹಾರ ಸಮರ್ಪಿಸಿರುವುದು ವಿಶೇಷವಾಗಿತ್ತು. ಥೇಟ್ ಬಂಡೆಗಳನ್ನೇ ಹೋಲುವ ಪ್ರತಿಕೃತಿಯಲ್ಲಿ ಬೃಹತ್ ಹಾರ ನಿರ್ಮಿಸಿದ ಅಭಿಮಾನಿಗಳು ಡಿಕೆಶಿಗೆ ಸಮರ್ಪಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಗ್ಯಾರಂಟಿಯನ್ನು ಪ್ರತಿ ಮನೆಗೆ ತಲುಪಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಕರೆ ನೀಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀಡುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.