ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ಪಕ್ಷಗಳು ಇನ್ನಿಲ್ಲದ ತಂತ್ರಗಾರಿಕೆಯಲ್ಲಿ ತೊಡಗಿದೆ. ಬೇರೆ ಪಕ್ಷಗಳಿಗಿಂತಲೂ ತುಸು ಮುನ್ನವೇ ಚುನಾವಣಾ ತಯಾರಿ ಪ್ರಾರಂಭಿಸಿದ್ದ ಕಾಂಗ್ರೆಸ್ ಇನ್ನೇನು ಅಭ್ಯರ್ಥಿ ಪಟ್ಟಿ ರಿಲೀಸ್ ಮಾಡಲು ಸಜ್ಜಾಗಿದೆ
ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾಲಭೈರವನ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಪತ್ನಿ ಸಮೇತ ಶಿವಕುಮಾರ್ ಭೇಟಿ ನೀಡಿದ್ರು. ಈ ವೇಳೆ ಕಾಲಭೈರವ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ರು..
ದೇವರ ಮೊರೆ ಹೋಗಿರುವ ಡಿ.ಕೆ.ಶಿ ಇದೇ ವೇಳೆ ಆದಿಚುಂಚನಗಿರಿ ಸಂಸ್ಥಾನದ ಮಠಕ್ಕೆ ಭೇಟಿ ನೀಡಿ ನಿರ್ಮಲನಂದನಾಥ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ್ರು. ದೇವರೆದುರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಇದು ನನ್ನ ಮತ್ತು ಭಗವಂತನ ನಡುವಿನ ವಿಚಾರ. ವರ ಕೇಳೋದು ನಾನು.. ಕೋಡೋನು ಅವನು ಎಂದು ಒಗಟಾಗಿ ಉತ್ತರಿಸಿದ್ರು.