Sunday, June 7, 2026
Homeಟಾಪ್ ನ್ಯೂಸ್BIHAR ELECTION : ಬಿಹಾರದ ಮತದಾರರಿಗೆ ವೇತನ ಸಹಿತ ರಜೆ ನೀಡಿ - ಡಿಕೆಶಿ ಮನವಿ

BIHAR ELECTION : ಬಿಹಾರದ ಮತದಾರರಿಗೆ ವೇತನ ಸಹಿತ ರಜೆ ನೀಡಿ – ಡಿಕೆಶಿ ಮನವಿ

ಬಿಹಾರ ಚುನಾವಣೆಗೆ (Bihar Election) ಇನೊಂದೆ ದಿನ ಬಾಕಿ ಉಳಿದಿದ್ದು, ಕರ್ನಾಟಕದಲ್ಲಿ (Karnataka) ಡಿಸಿಎಂ ಡಿಕೆ ಶಿವಕುಮಾರ್ (Dcm DK Shivakumar) ಭರ್ಜರಿ ಮತ ಬೇಟೆ ನಡೆಸುತ್ತಿದ್ದಾರೆ. ಇದೀಗ ಬಿಹಾರ ಚುನಾವಣೆಯ ಹಿನ್ನಲೆ ರಾಜ್ಯದಲ್ಲಿರೋ ಬಿಹಾರಿಗಳಿಗೆ ರಜೆ ನೀಡಲು ಸಂಬಂಧಪಟ್ಟ ಕಂಪೆನಿಗಳಿಗೆ ಮನವಿ ಮಾಡಿದ್ದಾರೆ.

ಇತ್ತೀಚಿಗೆ ರಾಜ್ಯದ ಬಿಹಾರಿ ಸಂಘಟನೆಯನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್ ಮಹಾಘಟಬಂದನ್ ಪರ ಪ್ರಚಾರ ಮಾಡಿದ್ದು, ತೇಜಸ್ವಿ ಯಾದವ್ ಸಿಎಂ ಆಗಲು ಸಹಕರಿಸಿ ಎಂದು ಮನವಿ ಮಾಡಿದ್ದರು.

ನವೆಂಬರ್ 6 ಮತ್ತು11ರಂದು ಬಿಹಾರ್ ಚುನಾವಣೆ ಹಿನ್ನೆಲೆ ಇದೀಗ ಮತದಾನಕ್ಕಾಗಿ ಬಿಹಾರಿಗಳು ತೆರಳಲು ಅನುವು ಮಾಡಿಕೊಡಲು ಡಿಸಿಎಂ ಡಿಜೆ ಶಿವಕುಮಾರ್ ಮುಂದಾಗಿದ್ದಾರೆ.

ಅಲ್ಲದೇ ರಾಜ್ಯದಲ್ಲಿರೋ ಬಿಹಾರಿಗಳಿಗೆ ವೇತನ ಸಹಿತ ರಜೆ ನೀಡಿ ಮತದಾನಕ್ಕಾಗಿ ಬಿಹಾರ್ ಗೆ ಕಳುಹಿಸಿಕೊಡುವಂತೆ ಡಿಸಿಎಂ ಡಿಕೆಶಿವಕುಮಾರ್ ಮನವಿ ಮಾಡಿದ್ದಾರೆ. ಅದರಂತೆ ಕಂಪನಿ, ವಾಣಿಜ್ಯ ಉದ್ಯಮಿಗಳು ಹೋಟೆಲ್,ಗುತ್ತಿಗೆದಾರರು, ಬಿಲ್ಡರ್ಸ್ ಗಳು,ಅಂಗಡಿ ಮುಂಗಟ್ಟುಗಳು ಹಾಗೂ ಇತರ ಉದ್ದಿಮೆದಾರರಿಗೆ ಕನಿಷ್ಠ 3 ದಿನ ರಜೆ ನೀಡಲು ಮನವಿ ಮಾಡಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!