Monday, April 21, 2025
Homeಕ್ರೈಂDK SHIVAKUMAR : ಹನಿಟ್ರ್ಯಾಪ್​​ಗೆ ಒಳಗಾದವರು ಫಸ್ಟ್​​ ಕಂಪ್ಲೇಂಟ್ ಕೊಡಲಿ- ಡಿಸಿಎಂ ಡಿಕೆಶಿ

DK SHIVAKUMAR : ಹನಿಟ್ರ್ಯಾಪ್​​ಗೆ ಒಳಗಾದವರು ಫಸ್ಟ್​​ ಕಂಪ್ಲೇಂಟ್ ಕೊಡಲಿ- ಡಿಸಿಎಂ ಡಿಕೆಶಿ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಇದೀಗ ಪ್ರಭಾವಿ ಸಚಿವರಿಗೆ ಹನಿಟ್ರ್ಯಾಪ್​ ಮಾಡಲಾಗಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆಶಿ ಶಿವಕುಮಾರ್ ಅವರು, ಹನಿಟ್ರ್ಯಾಪ್​​ ಆಗಿದ್ದರೆ ಕೂಡಲೇ ಕಂಪ್ಲೇಂಟ್ ಕೊಡಲಿ. ಕಾನೂನು ಪ್ರಕಾರ ಕ್ರಮಕೈಗೊಳುತ್ತೇವೆ. ಯಾರೇ ಇರಲಿ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿದರೆ ತನಿಖೆ ಮಾಡಿಸಲಾಗುವುದು ಎಂದರು.

ಇನ್ನು ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದ್ದು ನಿಜ ಎಂದಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ಹನಿಟ್ರ್ಯಾಪ್​​​​ ಅನ್ನು ಕೆಲವರು ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಹನಿಟ್ರ್ಯಾಪ್​​​ಗೆ ಒಳಗಾದ ಸಂಬಂಧಿಸಿದ ಸಚಿವರಿಗೆ ದೂರು ನೀಡಲು ಹೇಳಿದ್ದೀನಿ. ಇದಕ್ಕೆ ಕಡಿವಾಣ ಹಾಕಲೇಬೇಕು. ಹನಿಟ್ರ್ಯಾಪ್​​ ಮಾಡುವಲ್ಲಿ ವಿಫಲವಾಗಿದ್ದಾರೆ. ಈ ರೀತಿ ಕರ್ನಾಟಕದಲ್ಲಿ ನಡೆಯಬಾರದು. ಕರ್ನಾಟಕದಲ್ಲಿ ಹನಿಟ್ರ್ಯಾಪ್ ಎನ್ನುವುದು ಇದೇ ಮೊದಲೇನಲ್ಲ. ಕೇವಲ ನಮ್ಮ ಪಕ್ಷದವರಲ್ಲ, ಇತರ ಪಕ್ಷದ ನಾಯಕರು ಹನಿಟ್ರ್ಯಾಪ್​​ಗೆ ಒಳಗಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹೆಚ್ಚಿನ ಸುದ್ದಿ

error: Content is protected !!