Monday, June 15, 2026
Homeಟಾಪ್ ನ್ಯೂಸ್DK SHIVAKUMAR: ಪ್ರಮಾಣವಚನದ ನಂತರ ಖಾತೆ ಹಂಚಿಕೆ ಕುತೂಹಲ, ಡಿಕೆ ಬಳಿಯೇ ಉಳಿಯಲಿವೆ ಪವರ್ ಫುಲ್...

DK SHIVAKUMAR: ಪ್ರಮಾಣವಚನದ ನಂತರ ಖಾತೆ ಹಂಚಿಕೆ ಕುತೂಹಲ, ಡಿಕೆ ಬಳಿಯೇ ಉಳಿಯಲಿವೆ ಪವರ್ ಫುಲ್ ಪೋಸ್ಟ್!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ, ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (CM) ಇಂದು (ಜೂನ್ .3) ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಜೊತೆ 13 ಸಚಿವರೂ ಕೂಡ ಪ್ರಮಾಣವಚನ ಸ್ವೀಕರಿಸಿದ್ದು, ಖಾತೆ ಹಂಚಿಕೆ (Cabinet portfolio) var ಬಗ್ಗೆ ಕುತೂಹಲ ಮೂಡಿದೆ.

ಹೌದು, ಹೊಸ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಹಳೆಯ ಮಂತ್ರಿಗಳಾದ ಜಮೀರ್, ಮಹದೇವಪ್ಪ ಹಾಗೂ ತಂಗಡಗಿ ಸೇರಿದಂತೆ ಹಲವರನ್ನು ಕೈಬಿಡಲಾಗಿದೆ. ಇವರ ಬದಲು ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಎಚ್. ಮುನಿಯಪ್ಪ, ಯು.ಟಿ. ಖಾದರ್, ಜಾರ್ಜ್, ಸತೀಶ ಜಾರಕಿಹೊಳಿ, ಯತೀಂದ್ರ, ಭೈರತಿ ಸುರೇಶ, ಈಶ್ವರ ಖಂಡ್ರೆ ಮತ್ತು ಶರಣಗೌಡ ಪಾಟೀಲ ಒಳಗೊಂಡ ಹದಿಮೂರು ನಾಯಕರ ಹೊಸ ತಂಡ ಸಚಿವರಾಗಿ ಮೊದಲ ಹಂತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಅವರಿಗೆ ನೀಡಿದಂತೆಯೇ ನನಗೂ ಸಹಕಾರ ನೀಡಿ: ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿಕೆಶಿ ಮನವಿ

ಈ ಮಧ್ಯೆ ಆಡಳಿತದ ಮೇಲಿನ ಸಂಪೂರ್ಣ ಹಿಡಿತಕ್ಕಾಗಿ ಹಣಕಾಸು, ಗುಪ್ತಚರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR), ಮತ್ತು ಇತರೆ ಹಂಚಿಕೆಯಾಗದ ಪ್ರಭಾವಶಾಲಿ ಖಾತೆಗಳನ್ನು ಹೊಸ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದ್ದು ಈ ಪವರ್‌ಫುಲ್ ಖಾತೆಗಳು ಸಿಎಂ ಡಿಕೆ ನಿಯಂತ್ರಣದಲ್ಲೇ ಉಳಿಯುವುದು ಬಹುತೇಕ ಖಚಿತವಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!