Sunday, November 10, 2024
Homeಟಾಪ್ ನ್ಯೂಸ್ಸಂದಾನ ಬಿಟ್ಟು ಹೋರಾಟ ರೂಪಿಸಿ : ನಿರ್ಮಲಾನಂದನಾಥ ಶ್ರೀಗಳಿಗೆ ಡಿ.ಕೆ.ಶಿ ಒತ್ತಾಯ

ಸಂದಾನ ಬಿಟ್ಟು ಹೋರಾಟ ರೂಪಿಸಿ : ನಿರ್ಮಲಾನಂದನಾಥ ಶ್ರೀಗಳಿಗೆ ಡಿ.ಕೆ.ಶಿ ಒತ್ತಾಯ

ಒಕ್ಕಲಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದ್ದು ಕೂಡಲೇ ಉರಿ-ನಂಜೇಗೌಡ ವಿಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದ್ರೆ ನಾವು ಒಕ್ಕಲಿಗರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು.

ಬೆಳಗಾವಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಕಳಂಕ ತರಲೆಂದೇ ಉರಿ-ನಂಜೇಗೌಡ ಪಾತ್ರಗಳ ಬಗ್ಗೆ ಬಿಜೆಪಿ ಪದೇ ಪದೇ ಮಾತನಾಡುತ್ತಿದೆ. ಬಿಜೆಪಿ ಸಚಿವರಾಗಿರುವ ಮುನಿರತ್ನ ಈ ಬಗ್ಗೆ ಸಿನಿಮಾ ಮಾಡ್ತೀನಿ ಅಂತಾರೆ. ಇದಕ್ಕೆ ಅಶ್ವತ್ಥನಾರಾಯಣ್ ಚಿತ್ರಕಥೆಯಂತೆ.. ಇದನ್ನೆಲ್ಲಾ ನೋಡಿಯೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಈ ಬಗ್ಗೆ ಪ್ರಚಾರ ಮಾಡುತ್ತಿರುವ ಶೋಭಾ ಕರಂದ್ಲಾಜೆ, ಸಿಟಿ ರವಿ, ಅಶ್ವತ್ಥನಾರಾಯಣ್ ಒಕ್ಕಲಿಗ ವಿರೋಧಿಗಳು ಎಂದ್ರು ಹರಿಹಾಯ್ದರು.

ಪರಮಪೂಜ್ಯರಾದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳು ಸಚಿವರನ್ನು ಕರೆಸಿ ಮಾತನಾಡೋದಾಗಿ ಹೇಳಿದ್ದಾರೆ. ಅವರನ್ನು ಕರೆಯಿಸಿ ಮಾತನಾಡುವುದೇನಿಲ್ಲ.. ಇಂಥ ಕುಕೃತ್ಯಗಳಿಗೆ ಕೈಹಾಬೇಡಿ ಎಂದು ಎಚ್ಚರಿಕೆ ನೀಡಬೇಕು ಎಂದ್ರು. ಈ ಕುರಿತು ನೀವೇ ಮುಖಂಡತ್ವ ವಹಿಸಿ ಹೋರಾಟ ರೂಪಿಸಿ ಎಂದು ಶ್ರೀಗಳನ್ನು ಒತ್ತಾಯಿಸಿದ್ರು. ಒಕ್ಕಲಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮುಂದುವರೆದ್ರೆ ನಮ್ಮ ಸಮುದಾಯದವರು ತೀವ್ರಸ್ವರೂಪವಾದ ಹೋರಾಟ ಮಾಡಬೇಕಾಗುತ್ತೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ರು.

ಹೆಚ್ಚಿನ ಸುದ್ದಿ

error: Content is protected !!