Wednesday, February 19, 2025
Homeಬೆಂಗಳೂರುಮೀಸಲಾತಿ ವಿವಾದ ಸಿಎಂ ಎಬ್ಬಿಸುತ್ತಿರುವ ಗೊಂದಲವಷ್ಟೇ – ಡಿಕೆಶಿ

ಮೀಸಲಾತಿ ವಿವಾದ ಸಿಎಂ ಎಬ್ಬಿಸುತ್ತಿರುವ ಗೊಂದಲವಷ್ಟೇ – ಡಿಕೆಶಿ

ಅಲ್ಪಸಂಖ್ಯಾತರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಸಿಎಂ ಬಸವರಾಜ ಬೊಮ್ಮಾಯಿ ಗೊಂದಲವೆಬ್ಬಿಸಲು ಮಾಡುತ್ರಿರುವ ತಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬೊಮ್ಮಾಯಿ ಜಾರಿಗೊಳಿಸಲು ಹೊರಟಿರುವ ಮೀಸಲಾತಿ ನೀತಿ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಎಂದಿದ್ದಾರೆ.
ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡು ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ನೀಡುವ ಅಗತ್ಯವಿರಲಿಲ್ಲ. ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯ ಅನ್ನದಾತರಾಗಿರುವ ಕೃಷಿಕ ಸಮುದಾಯ. ನಾವು ಯಾವತ್ತೂ ಮೀಸಲಾತಿಗಾಗಿ ಕೇಳಿಯೇ ಇರಲಿಲ್ಲ. ಹಾಗಿದ್ದೂ ಕೊಡಬೇಕೆಂಬ ಇಚ್ಛೆ ಇದ್ದಲ್ಲಿ, ಸಂವಿಧಾನವನ್ನು ತಿದ್ದುಪಡಿ ಮಾಡಿ ನಂತರ ಜಾರಿಗೊಳಿಸಬಹುದಿತ್ತು. ಈ ಕ್ರಮ ಅಸಂವಿಧಾನಿಕವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಮ್ಮ ಪಕ್ಷವು ಸಂಪೂರ್ಣವಾಗಿ ಮುಸ್ಲಿಮರ ಪರವಾಗಿ ನಿಲ್ಲಲಿದ್ದು, ನಮ್ಮ ಮುಸ್ಲಿಂ ಕಾಳಜಿಯ ಬದ್ದತೆಯನ್ನು ಪ್ರದರ್ಶಿಸಲಿದ್ದೇವೆ. ಈ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ದವಿಲ್ಲ ಎಂದು ಡಿ.ಕೆ. ಶಿವಕುಮಾರ್ ನುಡಿದ್ದಾರೆ.
ಇದೇ ವೇಳೆ ಮಾಜಿ ಸಂಸದ ರಹಮಾನ್ ಖಾನ್ ನೇತೃತ್ವದಲ್ಲಿ ಕಾಂಗ್ರೆಸ್‍ನ ಮುಸ್ಲಿಂ ಮುಖಂಡರಾದ ಸಲೀಂ ಅಹ್ಮದ್, ಜಮೀರ್ ಅಹ್ಮದ್, ಅರ್ಷದ್ ರಿಜ್ವಾನ್ ಮತ್ತಿತರರು ಪ್ರತ್ಯೇಕ ಸಭೆ ನಡೆಸಿದ್ದು, ಬಿಜೆಪಿ ಮೀಸಲಾತಿ ವಿರುದ್ಧ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಮುಸ್ಲಿಂ ನಾಯಕರು ಪ್ರತ್ಯೇಕ ಸಭೆ ನಡೆಸಿ ಮೀಸಲಾತಿ ಬಗ್ಗೆ ಚರ್ಚೆ ನಡೆಸಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!