ಹಾಸನ: ರಾಜ್ಯದಲ್ಲಿ ಬಹುಚರ್ಚಿತ ಅಮೂಲ್ ಮಾರುಕಟ್ಟೆ ವಿಸ್ತರಣೆ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಭಿನ್ನವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಹಾಸನದಲ್ಲಿ ಡಿ.ಕೆ ಶಿವಕುಮಾರ್, ನಂದಿನಿ ಉತ್ಪನ್ನಗಳನ್ನು ಖರೀದಿಸಿ ಹಂಚುವ ಮೂಲಕ ರಾಜ್ಯದಲ್ಲಿ ಲಗ್ಗೆ ಇಡುತ್ತಿರುವ ಅಮುಲ್ ಉತ್ಪನ್ನಗಳಿಗೆ ವಿಭಿನ್ನವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಹಾಸನದ ಹೇಮಾವತಿ ಪ್ರತಿಮೆ ಬಳಿಯ ನಂದಿನಿ ಹಾಲಿನ ಕೇಂದ್ರದಲ್ಲಿ ಸುಮಾರು ಎರಡೂವರೆ ಸಾವಿರ ರೂ. ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದ ಡಿ.ಕೆ.ಶಿವಕುಮಾರ್ ಹಾಲು, ತುಪ್ಪ, ಮಜ್ಜಿಗೆ, ಮೈಸೂರ್ ಪಾಕ್ ಸೇರಿ ಹತ್ತಾರು ಉತ್ಪನ್ನ ಖರೀದಿ ಮಾಡಿ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಹಂಚಿದ್ರು . ಜೊತೆಗೆ ನಂದಿನಿ ಕೇಂದ್ರದಲ್ಲೇ ಫ್ಲೇವರ್ಡ್ ಮಿಲ್ಕ್ ಸವಿದು ನಂದಿನಿಗೆ ನಮ್ಮ ಬೆಂಬಲ ಎಂದ್ರು
ರಾಜ್ಯದಲ್ಲಿ ಅಮುಲ್ ಉತ್ಪನ್ನ ಮಾರಾಟಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಂದಿನಿ ಬ್ರ್ಯಾಂಡ್ ನಮ್ಮ ಹೆಮ್ಮೆ, ರಾಜ್‌ಕುಮಾರ್ ಇಂದೆ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದರು. ಇಂಥ ಬ್ರ್ಯಾಂಡ್ ಹಾಳುಮಾಡಲು ಗುಜರಾತಿನ ಅಮೂಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ತುರುಕಲಾಗ್ತಿದೆ. ಇದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು