Saturday, March 15, 2025
Homeಟಾಪ್ ನ್ಯೂಸ್DK SHIVAKUMAR : ಡಿಕೆಶಿ ಮುಖದಲ್ಲಿ ಲವಲವಿಕೆ, ಏನ್​​​ ಸರ್​ ಗುಡ್​​​​ ನ್ಯೂಸ್​​ ಎಂದ ಸಿ.ಟಿ.ರವಿ-...

DK SHIVAKUMAR : ಡಿಕೆಶಿ ಮುಖದಲ್ಲಿ ಲವಲವಿಕೆ, ಏನ್​​​ ಸರ್​ ಗುಡ್​​​​ ನ್ಯೂಸ್​​ ಎಂದ ಸಿ.ಟಿ.ರವಿ- VIDEO

ಬೆಂಗಳೂರು : ವಿಧಾನ ಪರಿಷತ್​​​ನ ಕಲಾಪದಲ್ಲಿ ಪರೋಕ್ಷವಾಗಿ ಸಿಎಂ ಅಧಿಕಾರದ ಹಂಚಿಕೆ, ಡಿಸಿಎಂ ಡಿಕೆಶಿ ಅವರು ಸಿಎಂ ಆಗುತ್ತಾರಾ? ಎಂಬ ಪ್ರಶ್ನೆಗಳ ಹಾಸ್ಯ ಚಟಾಕಿಗಳನ್ನು ಬಿಜೆಪಿ ಸದಸ್ಯರು ಹಾರಿಸಿದ ಪ್ರಸಂಗ ನಡೆಯಿತು.

ಬೆಂಗಳೂರು ಕಸ ಸಮಸ್ಯೆ, ಕಸ ವಿಲೇವಾರಿ ಕುರಿತಾದ ಚರ್ಚೆಯ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉತ್ತರಿಸುವಾಗ ಕೆಲ ತಾಂತ್ರಿಕ ಅಂಶಗಳನ್ನು ಅರಿಯಬೇಕಾಗಿದೆ. ಸೋಮವಾರ ಈ ಬಗ್ಗೆ ವಿವರವಾಗಿ ಉತ್ತರಿಸುವೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಮುಖದಲ್ಲಿ ಲವಲವಿಕೆ ಇದೆ… ತುಂಬಾ ಪ್ರಸನ್ನರಾಗಿದ್ದೀರಿ.. ಏನಾದ್ರೂ ಶುಭ ಸುದ್ದಿ, ಶುಭ ಶಕುನ ಸಿಕ್ಕಿದೆಯಾ? ನಮ್ಮೊಂದಿಗೂ ಸಿಹಿ ಸುದ್ದಿ ಹಂಚಿಕೊಳ್ಳಿ ಎಂದು ತಮಾಶೆ ಮಾಡಿದರು. ಇದಕ್ಕೆ ರವಿಕುಮಾರ್ ಧ್ವನಿಗೂಡಿಸಿ, ನಿನ್ನೆ ಬೇರೆ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದೀರಿ. ಗುಡ್ ನ್ಯೂಸ್ ಏನಾದ್ರೂ ಇದೆಯಾ? ಬಹುಶಃ ಎಲ್ಲರಿಗೂ ಊಟ ಹಾಕಿಸುವಂತೆ ನೀವು ಕಾಣುತ್ತಿದ್ದೀರಿ ಬಿಡಿ ಎಂದರು.

ಹಾಗೇನಿಲ್ಲ.. ನೀವು ಬರೋದಾದ್ರೆ ಎಲ್ಲರಿಗೂ ಊಟಕ್ಕೆ ಕರೆಯುತ್ತಿದ್ದೆ. ಎಲ್ಲರನ್ನ ಸಂತೋಷ ಪಡಿಸಿದರೆ, ನಾನೂ ಸಂತೋಷವಾಗಿರುತ್ತೇನೆ. ಆ ಪ್ರಯತ್ನದಲ್ಲಿ ನಾನಿದೀನಿ ಎಂದು ನಾಜೂಕು ದಾಟಿಯಲ್ಲಿ ನಗುತ್ತಲೇ ಶ್ಲೋಕದ ಮೂಲಕ ಡಿಕೆಶಿ ಅವರು ಉತ್ತರಿಸಿದರು.

ಹೆಚ್ಚಿನ ಸುದ್ದಿ

error: Content is protected !!