Monday, January 20, 2025
Homeಟಾಪ್ ನ್ಯೂಸ್2 ಲಕ್ಷ ನೀಡುವಂತೆ ಪೀಡಿಸಿ ಕೊಲೆ: ಕೆರೆಹಳ್ಳಿ ತಂಡದ ವಿರುದ್ಧ ಡಿಕೆಶಿ ಆರೋಪ

2 ಲಕ್ಷ ನೀಡುವಂತೆ ಪೀಡಿಸಿ ಕೊಲೆ: ಕೆರೆಹಳ್ಳಿ ತಂಡದ ವಿರುದ್ಧ ಡಿಕೆಶಿ ಆರೋಪ

ಗೋರಕ್ಷಣೆ ಹೆಸರಲ್ಲಿ ಕೊಲೆ, ಹಲ್ಲೆ ಮಾಡುತ್ತಿರುವ ಸಂಸ್ಕೃತಿಗೆ ಡಿಕೆ ಶಿವಕುಮಾರ್‌ ಸಾತನೂರಿನಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ಕೊಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಅವರೇ ನೇರ ಹೊಣೆ ಎಂದ ಡಿಕೆ ಶಿವಕುಮಾರ್ ಸಾತನೂರಿನಲ್ಲಿ ನೈತಿಕ ಪೊಲೀಸ್​ಗಿರಿ ನೆಪದಲ್ಲಿ ಕೊಲೆ ನಡೆದಿದೆ​​. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹತ್ಯೆಯಾದ ವ್ಯಕ್ತಿ ಬಳಿ 2 ಲಕ್ಷ ನೀಡುವಂತೆ ಪೀಡಿಸಿ ಕೊಂದಿದ್ದಾರೆ. ನಿಮ್ಮ ಕಾರ್ಯಕರ್ತ, ಸಹಪಾಠಿಯೇ ಕೊಲೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುತ್ತಿರುವುದು ಅಕ್ಷಮ್ಯ. ಕೊಲೆಗಾರರನ್ನು ಕೂಡಲೇ ಬಂಧಿಸದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಎಚ್ಚರಿಸಿದ್ದಾರೆ.

ಕೊಲೆಯಾದ ವ್ಯಕ್ತಿ, ರಸೀದಿ ಇಟ್ಟುಕೊಂಡೇ ಆ ದನಗಳನ್ನು ತೆಗೆದುಕೊಂಡು ಹೋಗ್ತಿದ್ದರು. ಸಾಕುವುದಕ್ಕೆ ರೈತರು ತೆಗೆದುಕೊಂಡು ‌ಹೋಗ್ತಿದ್ದರು. ಅಂತವನನನು ಹತ್ಯೆ ಮಾಡಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

ರಾಮನಗರದ ಸಾತನೂರಿನಲ್ಲಿ ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರಾದ ಪುನೀತ್‌ ಕೆರೆಹಳ್ಳಿ ಮತ್ತು ಆತನ ತಂಡದವರು ಜಾನುವಾರು ಸಾಗಾಟದ ವಾಹನಗಳನ್ನು ತಡೆದು ಮಾಡಿದ ದಾಳಿ ಬಳಿಕ ಮಂಡ್ಯ ಮೂಲದ ಯುವಕನೊಬ್ಬ ಮೃತಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!