Saturday, March 15, 2025
Homeಟಾಪ್ ನ್ಯೂಸ್BJP : ಪಕ್ಷ ವಿರೋಧಿ ಚಟುವಟಿಕೆ, ಸೋಮಶೇಖರ್-ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮಕ್ಕೆ ಮುಂದಾದ ಬಿಜೆಪಿ

BJP : ಪಕ್ಷ ವಿರೋಧಿ ಚಟುವಟಿಕೆ, ಸೋಮಶೇಖರ್-ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮಕ್ಕೆ ಮುಂದಾದ ಬಿಜೆಪಿ

ಹುಬ್ಬಳ್ಳಿ : ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೆಸ್​​​ ಪರ ನಿಲುವು ತೋರುತ್ತಿರುವ ಹಾಗೂ ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದಡಿ ಇದೀಗ ಶಾಸಕರಾದ ಎಸ್​​​ಟಿ ಸೋಮಶೇಖರ್​​ ಹಾಗೂ ಶಿವರಾಂ ಹೆಬ್ಬಾರ್ ಅವರ​ ವಿರುದ್ಧ ಬಿಜೆಪಿಯು ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರು, ಪಕ್ಷದ್ರೋಹ ಕೆಲಸ ಮಾಡಿದ ಇಬ್ಬರೂ ಶಾಸಕರ ವಿರುದ್ಧ ಸದ್ಯದಲ್ಲೇ ಶಿಸ್ತು ಕ್ರಮವಾಗಲಿದೆ. ಈ ಇಬ್ಬರೂ ಶಾಸಕರ ವಿರುದ್ಧ ಮಾರ್ಚ್​​ ಅಂತ್ಯದ ವೇಳೆಗೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆಯ ಬಳಿಕ ಶಿವರಾಂ ಹೆಬ್ಬಾರ್, ಸೋಮಶೇಖರ್ ನಿರಂತರ ಪಕ್ಷದ್ರೋಹ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಡಿನ್ನರ್​​​ ಪಾರ್ಟಿಗೆ ಹೋಗಿದ್ದು ದೊಡ್ಡದಲ್ಲ. ಅದಕ್ಕಿಂತ ಹೆಚ್ಚು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸೋಮಶೇಖರ್​ ಅವರು ಕಾಂಗ್ರೆಸ್​ ಸರ್ಕಾರದ ನಿಲುವುಗಳನ್ನು, ಗ್ಯಾರಂಟಿ ಯೋಜನೆಗಳ ಕುರಿತು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿರುವುದು ಗೊತ್ತೇ ಇದೆ.

ಹೆಚ್ಚಿನ ಸುದ್ದಿ

error: Content is protected !!