ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಲು ವಿವಿಧ ಇಲಾಖೆಗಳ ಅನುದಾನ ದುರುಪಯೋಗ ಮಾಡಿಕೊಂಡಿದೆ ಎಂದು ಈ ಮೊದಲು ಆರೋಪಿಸಿರುವ ಬಿಜೆಪಿಯು ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದೆ.
Shameful!
Karnataka Govt’s drastic 80% fund deduction for differently abled is really unfortunate. It is a blow to an already marginalized community. These cuts threaten vital services. It's crucial that @siddaramaiah Govt roll back this decision before it’s too late.… pic.twitter.com/VeXueVUFMn
— Pralhad Joshi (@JoshiPralhad) November 29, 2024
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಟ್ವೀಟ್ ಮಾಡಿದ್ದು, ಕರ್ನಾಟಕ ಸರ್ಕಾರವು ವಿಕಲಚೇತನರಿಗಾಗಿ ಮೀಸಲಾಗಿದ್ದ ನಿಧಿಯಲ್ಲಿ ಶೇ 80 ಕಡಿತ ಮಾಡಿರುವುದು ನಿಜಕ್ಕೂ ದುರದೃಷ್ಟಕರ. ದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯ ಸೇವೆಗಳಿಗೆ ಧಕ್ಕೆ ಆಗಲಿದೆ, ಸರ್ಕಾರ ಇದನ್ನು ಗಮನದಲ್ಲಿಟ್ಟು ಅವರಿಗೆ ಮೀಸಲಿಟ್ಟ ನಿಧಿಯನ್ನು ಅವರಿಗಾಗಿ, ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇವಲ 10 ಕೋಟಿ ರೂಪಾಯಿ ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ದುರದೃಷ್ಟಕರ ಸಂಗತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.