Wednesday, May 14, 2025
Homeಟಾಪ್ ನ್ಯೂಸ್VIRAL NEWS: ರಾಷ್ಟ್ರ ಧ್ವಜವನ್ನು ಕರವಸ್ತ್ರದಂತೆ ಬಳಸಿತಾ ಬಿಜೆಪಿ..? - ಕಾಂಗ್ರೆಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲೇನಿದೆ...

VIRAL NEWS: ರಾಷ್ಟ್ರ ಧ್ವಜವನ್ನು ಕರವಸ್ತ್ರದಂತೆ ಬಳಸಿತಾ ಬಿಜೆಪಿ..? – ಕಾಂಗ್ರೆಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲೇನಿದೆ ..?

ಬೆಂಗಳೂರು : ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ನಡೆಸಿ ಉಗ್ರರ ಅಡಗುದಾಣಗಳನ್ನು ಉಡೀಸ್ ಮಾಡಿರುವ ಬೆನ್ನಲ್ಲೇ ದೇಶದೆಲ್ಲೆದ ಪ್ರತೀಕಾರ ತೀರಿದ ಸಂಭ್ರಮ ಮನೆಮಾಡಿದೆ. ಹೀಗೆ ಬೆಂಗಳೂರಿನ ಜಯನಗರದಲ್ಲಿ ಸಿಹಿ ಹಂಚಿ ಸಂಭ್ರಮಿಸುವ ವೇಳೆ ರಾಷ್ಟ್ರಧ್ವಜವನ್ನು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅಪಮಾನಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್, ಶಾಸಕ ಸಿ.ಕೆ.ರಾಮಮೂರ್ತಿ ಹಾಗೂ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ವೇಳೆ ರಾಷ್ಟ್ರ ಧ್ವಜವನ್ನು ಕರವಸ್ತ್ರದಂತೆ ಬಳಸಿದ್ದಾರೆ ಎಂದು ಆರೋಪಿಸಿದೆ. ಈ ಕುರಿತು ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, ನಕಲಿ ದೇಶಪ್ರಮಿ ಬಿಜೆಪಿಗರು ಭಾರತದ ರಾಷ್ಟ್ರಧ್ವಜ, ಸಂವಿಧಾನವನ್ನು ಎಂದಿಗೂ ಒಪ್ಪಿಲ್ಲ. ಮನುವಾದಿಗಳು ಸಮಾನತೆ, ಐಕ್ಯತೆ, ಸಮಗ್ರತೆ ಸಾರುವ ರಾಷ್ಟ್ರಧ್ವಜವನ್ನು ಒಪ್ಪಲು ಸಾಧ್ಯವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಈ ವಿಡಿಯೋದಲ್ಲಿ ಏನಿದೆ ಎಂಬುದನ್ನು ಗಮನಿಸಿದ್ರೆ, ಶಾಸಕ ರಾಮಮೂರ್ತಿ ಸಾರ್ವಜನಿಕರಿಗೆ ಸಿಹಿ ಹಂಚಿ ಹಂಚುವ ವೇಳೆ ಶಾಸಕರ ಪಕ್ಕದಲ್ಲಿದ್ದ ಬಿಜೆಪಿ ಮುಖಂಡರೊಬ್ಬರು ಸಿಹಿ ಹಂಚಿದ ಕೈಯನ್ನು ರಾಷ್ಟ್ರಧ್ವಜಕ್ಕೆ ಒರೆಸಿದ್ದಾರೆ. ಇದನ್ನು ಶಾಸಕ ರಾಮಮೂರ್ತಿ ನೋಡಿಯೂ ಏನೂ ಪ್ರತಿಕ್ರಿಯಿಸಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೆಚ್ಚಿನ ಸುದ್ದಿ

error: Content is protected !!