Friday, March 21, 2025
Homeರಾಜಕೀಯಧ್ರುವ ನಾರಾಯಣ್ ಪತ್ನಿ ವೀಣಾ ವಿಧಿವಶ

ಧ್ರುವ ನಾರಾಯಣ್ ಪತ್ನಿ ವೀಣಾ ವಿಧಿವಶ

ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ದಿವಂಗತ ಧ್ರುವ ನಾರಾಯಣ್ ಪತ್ನಿ ವೀಣಾ ಧ್ರುವನಾರಾಯಣ್ ಶುಕ್ರವಾರ ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಧ್ರುವನಾರಾಯಣ್ ಅಗಲಿದ್ದು, ಪತಿ ನಿಧನರಾದ ಒಂದು ತಿಂಗಳಿಗೂ ಮುನ್ನವೇ ಪತ್ನಿಯೂ ವಿಧಿವಶರಾಗಿದ್ದಾರೆ.
ಕಳೆದ ಮಾ. 11 ರಂದು ಧ್ರುವನಾರಾಯಣ್ ಮೈಸೂರಿನಲ್ಲಿ ನಿಧರಾಗಿದ್ದರು. ಮೈಸೂರು ಭಾಗದಲ್ಲಿ ಪ್ರಬಲ ನಾಯಕರೂ ಹಾಗೂ ದಲಿತ ಮುಖಂಡರಾಗಿದ್ದ ಧ್ರುವನಾರಾಯಣ್ ಅಗಲಿಕೆ ಕಾಂಗ್ರೆಸ್ ಪಾಳೆಯದಲ್ಲಿ ತಲ್ಲಣವುಂಟುಮಾಡಿತ್ತು. ಹೀಗಾಗಿ ಧ್ರುವ ನಾರಾಯಣ್‍ರ ಪುತ್ರ ದರ್ಶನ್ ಧ್ರುವನಾರಾಯಣ್‍ಗೆ ಟಿಕೆಟ್ ಸಹ ಘೋಷಿಸಲಾಗಿತ್ತು. ತಂದೆ ಅಗಲಿದ ದುಃಖ ಮಾಯುವ ಮುನ್ನವೇ ದರ್ಶನ್‍ಗೆ ಈಗ ಮಾತೃವಿಯೋಗದ ಸಂಕಟ ಎದುರಾಗಿದೆ. ಪತಿಯ ಅಗಲಿಕೆಯ ಬಳಿಕ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!