Monday, June 15, 2026
Homeಕ್ರೈಂDHARMASTHALA CASE: ಮತ್ತೆ ಜೀವ ಪಡೆದ ಪದ್ಮಲತಾ ಕೇಸ್‌! 40 ವರ್ಷ ಹಳೆ ಪ್ರಕರಣ.. ನ್ಯಾಯ...

DHARMASTHALA CASE: ಮತ್ತೆ ಜೀವ ಪಡೆದ ಪದ್ಮಲತಾ ಕೇಸ್‌! 40 ವರ್ಷ ಹಳೆ ಪ್ರಕರಣ.. ನ್ಯಾಯ ಸಿಗುವ ವಿಶ್ವಾಸದಲ್ಲಿ ಪದ್ಮ ಸಹೋದರಿ

ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ಶವ ಹೂತುಹಾಕಿರುವ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ವಿಚಾರವಾಗಿ ಅನೇಕ ಬೇರೆ ಬೇರೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ರಾಜ್ಯ ಸರ್ಕಾರ ಪ್ರಕರಣದ ತನಿಖೆ ಮಾಡಲು ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಇನ್ನಾದರೂ ಸತ್ಯಾಂಶ ಹೊಸಬರಲಿದೆಯಾ ಎಂದು ಅನೇಕ ಕುಟುಂಬಗಳು ಕಾಯುತ್ತಿದೆ. ಈ ರೀತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಇನ್ನೊಂದು ಯುವತಿಯ ಪ್ರಕರಣ ಇದೀಗ ಸುದ್ದಿಯಾಗಿದ್ದು, ಸುಮಾರು 40 ವರ್ಷ ಹಿಂದಿನ ಕಥೆಯೇನು ಎಂಬುದು ಇಲ್ಲಿದೆ.

 ಪದ್ಮಲತಾ ಹತ್ಯೆ ಪ್ರಕರಣ ಮುನ್ನಲೆಗೆ
ಸುಮಾರು 40 ವರ್ಷಗಳ ಹಿಂದೆ ನಾಪತ್ತೆಯಾಗಿ ನಂತರ ಶವವಾಗಿ ಪತ್ತೆಯಾಗಿದ್ದ ಪದ್ಮಲತಾ ಹತ್ಯೆ ಪ್ರಕರಣ ಈಗ ಮುನ್ನೆಲೆಗೆ ಬಂದಿದ್ದು, ಪದ್ಮಲತಾ ಕುಟುಂಬಸ್ಥರು ನಮ್ಮ ಮನೆ ಹುಡುಗಿಗೂ ನ್ಯಾಯ ಸಿಗಲಿದೆ ಎಂದು ಕಾಯುತ್ತಿದ್ದಾರೆ.

 ಏನಿದು ಪದ್ಮಲತಾ ಪ್ರಕರಣ?
1986ರ ಡಿಸೆಂಬರ್ 22ರಂದು, ಧರ್ಮಸ್ಥಳದ ಬೋಳಿಯಾರು ಗ್ರಾಮದ ಪದ್ಮಲತಾ ಉಜಿರೆ ಕಾಲೇಜಿಗೆ ಕಾರ್ಯಕ್ರಮ ಇದೆ ಎಂದು ಹೋದವರು ಸಂಜೆಯಾದರೂ ಮರಳಿ ಬಂದಿಲ್ಲ. ಸುಮಾರು 56 ದಿನಗಳ ಶೋಧದ ನಂತರ ನೇತ್ರಾವತಿ ನದಿಯ ಸೇತುವೆ ಬಳ ಕೈ ಕಾಲು ಕಟ್ಟಿ ಹಾಕಿದ್ದ ರೀತಿಯಲ್ಲಿ ಮೃತದೇಹ ಲಭಿಸಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಿಗಳನ್ನ ಬಂಧಿಸಲಾಗಿರಲಿಲ್ಲ. ಆದರೆ ಈ ಬಾರಿಯಾದರೂ ಸತ್ಯಾನೂ ಸತ್ಯತೆ ತಿಳಿಯಬಹುದೋ ಎಂದು ಕುಟುಂಬಸ್ಥರು ನಿರೀಕ್ಷೆ ಮಾಡುತ್ತಿದ್ದಾರೆ.

R ASHOKA: ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಬಗ್ಗೆ ಅಪಪ್ರಚಾರ ಮಾಡಬೇಡಿ: ಅಶೋಕ್

ಮಾಧ್ಯಮಗಳ ಜೊತೆ ಮಾತನಾಡಿದ ಪದ್ಮಲತಾ ಸಹೋದರಿ ಚಂದ್ರಾವತಿ ಹೇಳುವ ಪ್ರಕಾರ, ಕಾಲೇಜಿನಲ್ಲಿ ಕಾಲೇಜ್‌ ಡೇ ಕಾರ್ಯಕ್ರಮ ಇದೆ ಎಂದು ಪದ್ಮಲತಾ ಹೋಗಿದ್ದರು. ಮರುದಿನ ರಾತ್ರಿಯ ಕಾರ್ಯಕ್ರಮಕ್ಕೆ ಇರುತ್ತೇನೆ. ಇವತ್ತು ಬೇಗ ಬರುತ್ತೇನೆ ಎಂದು ಹೇಳಿ ಹೋಗಿದ್ದರಂತೆ. ಆದರೆ ಸಂಜೆಯಾದರೂ ಅವರು ಮನೆಗೆ ಮರಳಿ ಬರದಿದ್ದಾಗ ಗಾಬರಿಕೊಂಡ ಪೋಷಕರು ಸುತ್ತ-ಮುತ್ತ ವಿಚಾರಿಸಿದ್ದಾರೆ. ಈ ರೀತಿ ವಿಚಾರಣೆ ಮಾಡಿದಾಗ ಅವರ ಸಂಬಂಧಿಕರೊಬ್ಬರು ಉಜಿರೆಯಿಂದ ಧರ್ಮಸ್ಥಳಕ್ಕೆ ಪದ್ಮಲತಾ ಬಂದಿದ್ದಾಗಿಯೋ ಹಾಗೂ ಬಸ್‌ ನಿಲ್ದಾಣದಲ್ಲಿ ಇಳಿದಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವಾಗಲೂ ಪದ್ಮಲತಾ ಧರ್ಮಸ್ಥಳದ ತನಕ ಬಸ್‌ನಲ್ಲಿ ಬಂದು ಅಲ್ಲಿಂದ ಮುಂದೆ ಜೀಪ್‌ನಲ್ಲಿ ಬರುತ್ತಿದ್ದರಂತೆ. ಆದರೆ ಆ ದಿನ ಅವರು ಜೀಪ್‌ ಹತ್ತಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಬಸ್‌ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ ಎಂದು ಬೆಳ್ತಂಗಡಿ ಪೊಲೀಸರಿ ದೂರು ನೀಡಲು ಪೋಷಕರು ಹೋಗಿದ್ದಾರೆ. ಆದರೆ ದೂರ ಪಡೆಯಲು ಪೊಲೀಸರು ನಿರಾಕರಿಸಿದ್ದಾರೆ.

DK SHIVAKUMAR: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಕೇಸ್-‌ ದಿಢೀರ್‌ ಎಸ್‌ಐಟಿ ರಚನೆ ಬಗ್ಗೆ ಡಿಕೆಶಿ ಹೇಳಿದ್ದೇನು..?

ಪದ್ಮಲತಾ ಅವರ ತಂದೆ ಆ ಕಾಲದಲ್ಲಿ ಕಮ್ಯೂನಿಸ್ಟ್‌ ಪಾರ್ಟಿಯಲ್ಲಿ ಸಕ್ರಿಯರಾಗಿದ್ದ ಕಾರಣ, ಕಮ್ಯೂನಿಸ್ಟ್‌ ನಾಯಕರ ಒತ್ತಾಯದ ಮೇರೆಗೆ ಪೊಲೀಸರು ದೂರು ಸ್ವೀಕರಿಸಿ ತನಿಖೆ ಮಾಡಿದ್ದಾರೆ. ಸುಮಾರು 56 ದಿನಗಳ ನಂತರ ನೇತ್ರಾವತಿ ನದಿಯ ಸೇತುವೆ ಬಳಿ ಅವರ ಮೃತದೇಹ ಲಭಿಸಿದೆ. ಆದರೆ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಅಸ್ಥಿಪಂಜರದ ಹಾಗೆ ದೇಹ ಲಭಿಸಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಿದರೂ ಯಾವುದೇ ಆರೋಪಿಗಳ ಪತ್ತೆಯಾಗದ ಕಾರಣ, ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು. ಆದರೆ ಪದ್ಮಲತಾ ಸಹೋದರಿ ಹೇಳುವ ಪ್ರಕಾರ, ಆ ಸಮಯದಲ್ಲಿ ತನಿಖೆ ಮಾಡಿದವರು, ಆರೋಪಿಗಳ ಪತ್ತೆಯಾಗಿದೆ. ಈ ಕೆಲಸ ಮಾಡಿದ್ದು ಯಾರೂ ಎಂಬುದು ಗೊತ್ತಾಗಿದೆ ಎಂದಿದ್ದರಂತೆ. ಆದರೆ ಈ ಸಮಯದಲ್ಲಿ ಆಗಿನ ಗೃಹ ಸಚಿವರೊಬ್ಬರು ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿ ಧರ್ಮಸ್ಥಳಕ್ಕೆ ಹೋಗಿದ್ದು, ಅಲ್ಲಿಗೆ ಹೋದ ನಂತರ ಪ್ರಕರಣವನ್ನ ಮುಚ್ಚಿ ಹಾಕಲಾಗಿದೆ ಎಂದು ಸಹೋದರಿ ಹೇಳಿದ್ದಾರೆ. ಇದೀಗ ಸರ್ಕಾರ ಎಸ್‌ಐಟಿ ರಚನೆ ಮಾಡಿರುವುದರಿಂದ ನಮ್ಮ ಸಹೋದರಿಯ ಸಾವಿಗೂ ನ್ಯಾಯ ಸಿಗಬೇಕು ಎಂದು ಚಂದ್ರಾವತಿ ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!