ದೇವನಹಳ್ಳಿ : ಕರ್ನೂಲ್ (kurnool) ಬಸ್ ದುರಂತದಿಂದ (Tragedy) ಎಚ್ಚೆತ್ತಿರೋ ಸಾರಿಗೆ ಇಲಾಖೆ ಖಾಸಗಿ ಬಸ್ ಗಳ ಮೇಲೆ ಕಾರ್ಯಾಚರಣೆಗೆ ಇಳಿದಿದೆ.
ಹೈದರಾಬಾದ್ ನಿಂದ ಬೆಂಗಳೂರಿನ ಕಡೆಗೆ ಬರ್ತಿದ್ದ ಬಸ್ ಗಳನ್ನು ಸಾರಿಗೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸುರಕ್ಷತಾ ಕ್ರಮ ಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ಬಸ್ ಗಳನ್ನು ಜಪ್ತಿ ಮಾಡಿ ದಂಡ ಹಾಕಿದ್ದಾರೆ.
ಹೊರ ರಾಜ್ಯದ ಐದು ಖಾಸಗಿ ಬಸ್ ಗಳನ್ನ ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತೆರಿಗೆ ಕಟ್ಟದ ಮತ್ತು ಸಾರಿಗೆ ನಿಯಮಗಳನ್ನ ಪಾಲಿಸದ ಬಸ್ ಗಳು ಲಿಸ್ಟ್ ಮಾಡಿದ ಅಧಿಕಾರಿಗಳು ಮಾಲೀಕರ ಮೇಲೆ ಕೇಸ್ ಹಾಕಿದ್ದಾರೆ.
ಇನ್ನು, ಕಾರ್ಯಾಚರಣೆ ವೇಳೆ ಸಾರಿಗೆ ನಿಯಮಗಳು ಪಾಲಿಸದಿರುವುದು ಬೆಳಕಿಗೆ ಬಂದಿದೆ.ನಾಗಲ್ಯಾಂಡ್, ತೆಲಂಗಾಣ ಇನ್ನಿತರ ರಾಜ್ಯಗಳ ಖಾಸಗಿ ಬಸ್ ಸೀಜ್ ಆಗಿದೆ.
ದೇವನಹಳ್ಳಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಬಿ.ಸುಧೀರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮುಂದೆಯೂ ಅಗತ್ಯಬಿದ್ದರೆ ಇದನ್ನು ಮುಂದುವರೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಗುಪ್ತಾಂಗದ ಫೋಟೋ ಕಳಿಸಿ ಟಾರ್ಚರ್ – ಶೆಡ್ ಗೆ ಬದಲು ಪೊಲೀಸ್ ಠಾಣೆಗೆ ಕರೆದ ಪ್ರಬುದ್ಧ ನಟಿ!