Thursday, April 16, 2026
Homeಟಾಪ್ ನ್ಯೂಸ್DONALD TRUMP: ಇರಾನ್‌ ಸರ್ವನಾಶದ ಹೇಳಿಕೆ, ಟ್ರಂಪ್‌ಗೆ ಅಮೆರಿಕಾದಲ್ಲೇ ಶುರುವಾಯ್ತು ವಿರೋಧ!

DONALD TRUMP: ಇರಾನ್‌ ಸರ್ವನಾಶದ ಹೇಳಿಕೆ, ಟ್ರಂಪ್‌ಗೆ ಅಮೆರಿಕಾದಲ್ಲೇ ಶುರುವಾಯ್ತು ವಿರೋಧ!

ಅಮೆರಿಕ:  ಇರಾನ್ ನಾಗರಿಕತೆಯನ್ನೇ ಸರ್ವನಾಶ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಡೆ ಈಗ ಅಮೆರಿಕದ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳುವಂತಹ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು 70ಕ್ಕೂ ಹೆಚ್ಚು ಡೆಮೋಕ್ರಾಟ್ ಸಂಸದರು ಈಗ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

 

ಜಿನೀವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ
ಟ್ರಂಪ್ ಅವರ ನಡೆ ಸಂವಿಧಾನ ಮತ್ತು ಜಿನೀವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿನ್ನೆಲೆಯಲ್ಲಿ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯನ್ನು ಜಾರಿಗೆ ತಂದು, ಟ್ರಂಪ್ ಅವರು ದೇಶದ ಆಡಳಿತ ನಡೆಸಲು ಅಶಕ್ತರು ಎಂದು ಘೋಷಿಸಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಅಥವಾ ಅವರ ವಿರುದ್ಧ ಪದಚ್ಯುತಿ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸಂಸದ ಎಡ್ ಮಾರ್ಕಿ ಮತ್ತು ಕ್ರಿಸ್ ಮರ್ಫಿ ಸೇರಿದಂತೆ ಹಲವು ಪ್ರಮುಖ ನಾಯಕರು ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಯಾವುದೇ ಬುದ್ಧಿ ಇರುವ ಅಧ್ಯಕ್ಷರು ಇಡೀ ನಾಗರಿಕತೆಯನ್ನು ನಾಶಪಡಿಸುವ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಟ್ರಂಪ್ ಇರಾನ್ ಮೇಲೆ ವಿಧಿಸಿದ್ದ ಗಡುವು ಮುಗಿಯುವ ಕೆಲವೇ ಗಂಟೆಗಳ ಮೊದಲು ಅಮೆರಿಕ ತನ್ನ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದಾಗಿ ಮತ್ತು ಎರಡೂ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಘೋಷಿಸಿದರು. ಆದರೂ ಕೂಡ ಸಂಸದರ ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ. ಕದನ ವಿರಾಮ ತಾತ್ಕಾಲಿಕವಾಗಿರಬಹುದು, ಆದರೆ ಟ್ರಂಪ್ ಆಗಲೇ ಒಂದು ರಾಷ್ಟ್ರವನ್ನು ಭೂಪಟದಿಂದ ಅಳಿಸಿ ಹಾಕುವ ಬೆದರಿಕೆ ಹಾಕುವ ಮೂಲಕ ದೊಡ್ಡ ಅಪರಾಧ ಎಸಗಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ಮತ್ತು ಜಗತ್ತಿಗೆ ಮತ್ತಷ್ಟು ಅಪಾಯವಿದೆ ಎಂದು ಸಂಸದ ಸೇತ್ ಮೌಲ್ಟನ್ ಕಳವಳ ವ್ಯಕ್ತಪಡಿಸಿದ್ದಾರೆ.

 ಚಾಟಿ ಬೀಸಿದ ವಿಶ್ವಸಂಸ್ಥೆ
ನಡುವೆ ವಿಶ್ವಸಂಸ್ಥೆಯು ಕೂಡ ಟ್ರಂಪ್ ಹೆಸರನ್ನು ಎತ್ತದೆ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. ಯುದ್ಧಕ್ಕೂ ಕೆಲವು ನಿಯಮಗಳಿವೆ ಮತ್ತು ಯಾವುದೇ ಮಿಲಿಟರಿ ಗುರಿಯು ಒಂದು ಸಮಾಜದ ಮೂಲಸೌಕರ್ಯಗಳನ್ನು ನಾಶಪಡಿಸುವುದನ್ನು ಅಥವಾ ಸಾಮಾನ್ಯ ನಾಗರಿಕರಿಗೆ ತೊಂದರೆ ಕೊಡುವುದನ್ನು ಸಮರ್ಥಿಸುವುದಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ. ಹಿಂದೆ ಎರಡು ಬಾರಿ ಪದಚ್ಯುತಿ ಭೀತಿ ಎದುರಿಸಿ ಗೆದ್ದಿದ್ದ ಟ್ರಂಪ್ ಅವರಿಗೆ ಈಗ ಮೂರನೇ ಬಾರಿಗೆ ಅಂತಹದ್ದೇ ಭೀತಿ ಎದುರಾಗಿದ್ದು, ಮುಂಬರುವ 2026 ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಸೋತರೆ ತಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬುದು ಅವರಿಗೆ ಈಗಲೇ ಅರಿವಾದಂತಿದೆ.

ಇದನ್ನೂ ಓದಿ: ಕದನ ವಿರಾಮಕ್ಕೆ ಡೋಂಟ್‌ ಕೇರ್ : ಇರಾನ್ ತೈಲ ಘಟಕದ ಮೇಲೆ ಇಸ್ರೇಲ್ ಭೀಕರ ದಾಳಿ -VIDEO

ಹೆಚ್ಚಿನ ಸುದ್ದಿ

Change Language »
error: Content is protected !!