Thursday, April 16, 2026
Homeಕ್ರೈಂBENGALURU: ಎರಡನೇ ಫ್ಲೋರ್ ಗೆ ಕರೆದಿದ್ದಕ್ಕೆ ಗ್ರಾಹಕನ ಮೂಗಿನ ಮೂಳೆ ಮುರಿದ ಡೆಲಿವರಿ ಬಾಯ್!

BENGALURU: ಎರಡನೇ ಫ್ಲೋರ್ ಗೆ ಕರೆದಿದ್ದಕ್ಕೆ ಗ್ರಾಹಕನ ಮೂಗಿನ ಮೂಳೆ ಮುರಿದ ಡೆಲಿವರಿ ಬಾಯ್!

ಬೆಂಗಳೂರು: ಬ್ಲಿಂಕ್ ಇಟ್ ಡೆಲಿವರಿ ಬಾಯ್‌ (Delivery Boy) ಒಬ್ಬ ಗ್ರಾಹಕನೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ (Bengaluru) ಕೋರಮಂಗಲ (Koramangala) 8ನೇ ಬಾಕ್ಲ್​ನಲ್ಲಿ ನಡೆದಿದೆ. ಡೆಲಿವರ್‌ ಬಾಯ್‌ ಕೊಟ್ಟ ಪಂಚ್‌ಗೆ ಗ್ರಾಹಕನ ಮೂಗಿನ ಮೂಳೆಯೇ ಮುರಿದು ಹೋಗಿದೆ.

ಕೋರಮಂಗಲ 8ನೇ ಬ್ಲಾಕ್​ ನಿವಾಸಿ ಪೌಲ್ ಎಂಬಾತ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ನಡು ರಾತ್ರಿ 2 ಗಂಟೆ ವೇಳೆಗೆ ಸ್ನ್ಯಾಕ್ಸ್ ಬುಕ್ ಮಾಡಿದ್ದ. 2 ಗಂಟೆ 8 ನಿಮಿಷಕ್ಕೆ ಡೆಲಿವರಿ ಬಾಯ್‌ ಗ್ರಾಹಕನ ಮನೆಗೆ ಆಗಮಿಸಿದ್ದು, ನೇರವಾಗಿ ನಾಲ್ಕನೇ ಫ್ಲೋರ್​​ಗೆ ಹೋಗಿದ್ದಾನೆ.

ಆಗ ಗ್ರಾಹಕನಿಗೆ ಕರೆ ಮಾಡಿದಾಗ ಆತ ಎರಡನೇ ಫ್ಲೋರ್‌ಗೆ ಬರುವಂತೆ ಕೇಳಿದ್ದಾನೆ. ಇದರಿಂದ ಸಿಟ್ಟಾದ ಡೆಲಿವರಿ ಬಾಯ್‌ ಎರಡನೇ ಫ್ಲೋರ್‌ಗೆ ಹೋಗಿ ಗ್ರಾಹಕನ ಜೊತೆಗೆ ಗಲಾಟೆ ಮಾಡಿದ್ದಾನೆ‌. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಡೆಲಿವರಿ ಬಾಯ್ ಮತ್ತು ಗ್ರಾಹಕನ ನಡುವೆ ಹೊಡೆದಾಟವೇ ನಡೆದು ಹೋಗಿದೆ.

ಆಗ ಡೆಲಿವರಿ ಬಾಯ್ ಗ್ರಾಹಕನ ಮೂಗಿಗೆ ಗುದ್ದಿದ್ದು, ಗ್ರಾಹಕ ಪೌಲ್​​ನ ಮೂಗು ಹಾಗೂ ತುಟಿಗೆ ಗಂಭೀರ ಗಾಯವಾಗಿದೆ. ಇದೆಲ್ಲದರ ನಂತರ ಪೌಲ್‌ ಆಸ್ಪತ್ರೆಯಲ್ಲಿ ಎಕ್ಸ್ ರೇ ತೆಗೆಸಿ ನೋಡಿದಾಗ ಮೂಗಿನ ಮೂಳೆಯೇ ಮುರಿದಿರುವುದು ತಿಳಿದು ಬಂದಿದೆ.

ಪ್ರಸ್ತುತ ಪೌಲ್‌ ಚಿಕಿತ್ಸೆಗಾಗಿ ಹುಟ್ಟೂರು ಕೇರಳಗೆ ತೆರಳಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಡೆಲಿವರಿ ಬಾಯ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಕುಟುಂಬ ಕಲಹದ ದಾರುಣ ಅಂತ್ಯ: ಅಣ್ಣ-ತಂಗಿಯನ್ನು ಕೊಚ್ಚಿ ಕೊಂದ ಸಹೋದರ ಬಂಧನ

ಹೆಚ್ಚಿನ ಸುದ್ದಿ

Change Language »
error: Content is protected !!