ದೆಹಲಿ: ವ್ಯಕ್ತಿಯೊಬ್ಬ ತನ್ನ ಹುಟ್ಟು ಹಬ್ಬದಂದು ಪೊಲೀಸರ ಅತಿಥಿಯಾದ ಘಟನೆ ದೆಹಲಿಯ ಸರೈ ಪ್ರದೇಶದಲ್ಲಿ ನಡೆದಿದೆ.
ಹುಟ್ಟು ಹಬ್ಬದಂದು ಸಾಮಾನ್ಯವಾಗಿ ಚಾಕುವಿನಿಂದ ಕೇಕ್ ಕಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸ್ವಲ್ಪ ಢಿಪರೆಂಟ್ ಆಗಿರಲಿ ಎಂದು ಪಿಸ್ತೂಲ್ ನಿಂದ ಕೇಕ್ ಕಟ್ ಮಾಡಿದ್ದಾನೆ. ಇದಲ್ಲದೇ ತನ್ನ ಈ ಸಾಹಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆತ ಪಿಸ್ತೂಲ್ ನಿಂದ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಭಾರೀ ವೈರಲ್ ಆಗಿದ್ದು, ಪೊಲೀಸರು ಆತ ಬಳಸಿದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೆಹಲಿ ಪೊಲೀಸರು ಹಂಚಿಕೊಂಡ ವಿಡಿಯೋ 35 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಭದ್ರತಾ ಪಡೆಗಳ ಕ್ರಮವನ್ನು ಸಾಕಷ್ಟು ಬಳಕೆದಾರರು ಶ್ಲಾಘಿಸಿದ್ದಾರೆ.