Thursday, March 12, 2026
Homeಟಾಪ್ ನ್ಯೂಸ್DELHI : JNU ಸ್ಟೂಡೆಂಟ್ಸ್ ಪ್ರೊಟೆಸ್ಟ್, ವಿದ್ಯಾರ್ಥಿ ಒಕ್ಕೂಟದ ನಾಯಕತ್ವ ಸಂಪೂರ್ಣ ಅಮಾನತು

DELHI : JNU ಸ್ಟೂಡೆಂಟ್ಸ್ ಪ್ರೊಟೆಸ್ಟ್, ವಿದ್ಯಾರ್ಥಿ ಒಕ್ಕೂಟದ ನಾಯಕತ್ವ ಸಂಪೂರ್ಣ ಅಮಾನತು

ನವದೆಹಲಿ: ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ (JNU students Union) ಎಲ್ಲಾ ಚುನಾಯಿತ ನಾಯಕತ್ವವನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ಜೆ.ಎನ್.ಯು ನಲ್ಲಿ ಬಯೋಮೆಟ್ರಿಕ್ ಸಿಸ್ಟಂ (Biometric system) ಅಳವಡಿಕೆ ವಿರೋಧಿಸಿ ಪ್ರತಿಭಟಿಸುವ (Protest) ವೇಳೆ ಸಿಸಿಟಿವಿ (CCTV) ಸೇರಿದಂತೆ ಸಾಕಷ್ಟು ಆಸ್ತಿಗಳಿಗೆ ಹಾನಿ ಉಂಟುಮಾಡಿದ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ ಕೇವಲ 15 ದಿನಗಳಲ್ಲಿ 800 ಕ್ಕೂ ಹೆಚ್ಚು ಜನರು ನಾಪತ್ತೆ!

ಜವಾಹರಲಾಲ್ ನೆಹರೂ ಯೂನಿವರ್ಸಿಟಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್ ಯಾದವ್, ಜಂಟಿ ಕಾರ್ಯದರ್ಶಿ ದಾನಿಶ್ ಆಲಿ ಸೇರಿದಂತೆ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಕೂಡ ಒಳಗೊಂಡಂತೆ ಐವರನ್ನು ಎರಡು ಸೆಮಿಸ್ಟರ್​ಗಳವರೆಗೆ ಅಮಾನತುಗೊಳಿ 20 ಸಾವಿರ ದಂಡ ವಿಧಿಸಲಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಸೆಂಟ್​ರಲ್ ಲೈಬ್ರರಿಯ ಪ್ರವೇಶದಲ್ಲಿ ಬಯೋಮೆಟ್ರಿಕ್ ಅಳವಡಿಕೆ ವಿರೋಧಿಸಿ ಕಳೆದ ವರ್ಷ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಗೇಟ್​​ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗೆ ಹಾನಿಯಾಗಿ ಸುಮಾರು 20 ಲಕ್ಷ ರೂ ನಷ್ಟವಾಗಿತ್ತು. ನವೆಂಬರ್ 21, 2025 ರಂದು ಈ ಬಗ್ಗೆ ತನಿಖೆ ನಡೆಸಲಾಗಿ ಇದೀಗ್ ವಿದ್ಯಾರ್ಥಿ ಸಂಘದ ನಾಯಕತ್ವದ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!