Wednesday, August 19, 2026
Homeಟಾಪ್ ನ್ಯೂಸ್HIGH COURT : ಪತಿ ಆದಾಯ ವಿವರ ಕೋರಿ ಪತ್ನಿ ಆರ್​​​​​​​ಟಿಐ ಅರ್ಜಿ ಸಲ್ಲಿಸುವಂತಿಲ್ಲ- ದೆಹಲಿ...

HIGH COURT : ಪತಿ ಆದಾಯ ವಿವರ ಕೋರಿ ಪತ್ನಿ ಆರ್​​​​​​​ಟಿಐ ಅರ್ಜಿ ಸಲ್ಲಿಸುವಂತಿಲ್ಲ- ದೆಹಲಿ ಹೈಕೋರ್ಟ್

ನವದೆಹಲಿ: ವೈವಾಹಿಕ ಕಲಹದ (family conflict) ಸಂದರ್ಭದಲ್ಲಿ ಜೀವನಾಂಶದ (Alimony) ಮೊತ್ತವನ್ನು ನಿರ್ಧರಿಸಲು ಪತಿಯ ಆದಾಯ ತೆರಿಗೆ (IT) ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಪಡೆದುಕೊಳ್ಳಲು ಪತ್ನಿಗೆ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ (Delhi Highcourt) ಆದೇಶಿಸಿದೆ. ವ್ಯಕ್ತಿಯೊಬ್ಬರ ಆದಾಯ ಮತ್ತು ತೆರಿಗೆಗೆ ಸಂಬಂಧಿಸಿದ ದಾಖಲೆಗಳು ಅವರ ಖಾಸಗಿ ವಿಚಾರಗಳಾಗಿದ್ದು, ಇವುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಆರ್ಟಿಐ ಕಾಯ್ದೆ ವಿನಾಯಿತಿ ನೀಡಿದೆ ಎಂದು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಹಿಂದೆ ಪತಿಯ ಆದಾಯದ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಕೌಟುಂಬಿಕ ಜಗಳಗಳಲ್ಲಿ ವೈಯಕ್ತಿಕ ರಹಸ್ಯಗಳನ್ನು ತಿಳಿಯಲು ಮತ್ತು ಸಾಕ್ಷ್ಯಗಳನ್ನು ಕಲೆಹಾಕಲು ಆರ್ಟಿಐ ಅನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ‘ಸಣ್ಣ ಮೀನು ಹಿಡಿದರೆ ಪ್ರಯೋಜನವಿಲ್ಲ’: ಲೋಕಾಯುಕ್ತಕ್ಕೆ ಹೈಕೋರ್ಟ್ ಚಾಟಿ!

ಜೀವನಾಂಶಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳಲ್ಲಿ ದಂಪತಿಗಳು ತಮ್ಮ ಆಸ್ತಿಪಾಸ್ತಿಗಳ ವಿವರಗಳನ್ನು ಅಫಿಡವಿಟ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಆ ಕಾನೂನಾತ್ಮಕ ಮಾರ್ಗಗಳನ್ನು ಅನುಸರಿಸಬೇಕೇ ವಿನಃ ಆರ್ಟಿಐ ಮೂಲಕ ಪತಿಯ ಖಾಸಗಿ ಹಣಕಾಸಿನ ಹಿತಾಸಕ್ತಿಗೆ ಧಕ್ಕೆ ತರಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!