Wednesday, August 19, 2026
Homeಟಾಪ್ ನ್ಯೂಸ್HIGH COURT : ಆಸ್ಪತ್ರೆಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ದಾಖಲೆ ಕೇಳಬಾರದು- ಕೋರ್ಟ್

HIGH COURT : ಆಸ್ಪತ್ರೆಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ದಾಖಲೆ ಕೇಳಬಾರದು- ಕೋರ್ಟ್

ನವದೆಹಲಿ : ದೆಹಲಿ ಹೈಕೋರ್ಟ್ ಒಂದು ಅತ್ಯುತ್ತಮ ಆದೇಶ ನೀಡಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಕೋರ್ಟ್ ಆದೇಶದಂತೆ ಗರ್ಭಪಾತಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಬಂದರೆ, ಅವರ ಐಡಿ ಕಾರ್ಡ್​ ಕೊಡಿ ಎಂದು ಆಸ್ಪತ್ರೆಗಳು ಕೇಳುವಂತಿಲ್ಲ ಎಂದು ಹೇಳಿದೆ.

ಅಪ್ರಾಪ್ತರು ಆಸ್ಪತ್ರೆಗೆ ಬಂದಲ್ಲಿ ದಾಖಲೆಗಳನ್ನು ನೀಡಿ, ಇಲ್ಲವೇ ಐಡಿ ಕಾರ್ಡ್ ತೋರಿಸಿ ಎಂದು ಆಸ್ಪತ್ರೆಗಳು ಕೇಳಬಾರದು’ ಎಂದು ನ್ಯಾ. ಸ್ವರ್ಣಕಾಂತ ಶರ್ಮ ಪೀಠವು ಆಸ್ಪತ್ರೆಗಳಿಗೆ ಸೂಚಿಸಿದೆ.

ಗುರುತಿನ ದಾಖಲೆ ಹಾಜರುಪಡಿಸಲು ಒತ್ತಾಯ ಮಾಡುವುದು, ಅಲ್ಟ್ರಾ‌ಸೌಂಡ್‌ ಸ್ಕ್ಯಾನಿಂಗ್‌ನಂತ ವೈದ್ಯಕೀಯ ತಪಾಸಣೆಗೆ ವಿಳಂಬ ಮಾಡಿದರೆ ಪ್ರಕರಣವು ಇನ್ನಷ್ಟು ಜಟಿಲಗೊಳ್ಳುತ್ತದೆ. ಇಂಥಾ ಪ್ರಕರಣಗಳಲ್ಲಿ ಸಂತ್ರಸ್ತೆಯು ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟವರು ಎಂಬ ಸೂಕ್ಷ್ಮವನ್ನು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರ್ಟ್ ಹೇಳಿದೆ.

ವೈದ್ಯಕೀಯ ಮಾನದಂಡ, ಕೆಲ ಕಾನೂನಿಗೆ ಜೋತುಬೀಳದೆ, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಎದುರಿಸುತ್ತಿರುವ ಸಮಸ್ಯೆಯನ್ನು ಅರಿತು, ಸಹಾನುಭೂತಿಯಿಂದ ವರ್ತಿಸಬೇಕು’ ಎಂದು ಪೀಠ ಹೇಳಿದೆ.
‘ಒಂದೊಮ್ಮೆ ಸಂತ್ರಸ್ತೆ 24 ವಾರಗಳ ಗರ್ಭಿಣಿಯಾಗಿದ್ದಲ್ಲಿ ತಕ್ಷಣವೇ ವೈದ್ಯಕೀಯ ಮಂಡಳಿ ರಚಿಸಬೇಕು. ನ್ಯಾಯಾಲಯದ ಯಾವುದೇ ನಿರ್ದೇಶನಗಳಿಗೆ ಕಾಯದೆ ಟ್ರೀಟ್​ಮೆಂಟ್ ಕೊಡಬೇಕು’ ಎಂದು ಪೀಠ ಹೇಳಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!