ನವದೆಹಲಿ: ದೀಪಾವಳಿಯ ಹಬ್ಬದಂದು ಚಿಕನ್ ಬಿರಿಯಾನಿ ಆರ್ಡರ್ ಮಾಡಲು ಬಂದ ಫುಡ್ ಡೆಲಿವರಿ ಏಜೆಂಟ್ ದೆಹಲಿ ನಿವಾಸಿಯೊಬ್ಬರಿಗೆ ಛೀಮಾರಿ ಹಾಕಿದ ಘಟನೆ ನಡೆದಿದೆ.
ಈ ಅನುಭವವನ್ನು ದೆಹಲಿ ನಿವಾಸಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ದೀಪಾವಳಿಯಂದು ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಅದನ್ನು ಡೆಲಿವರಿ ಮಾಡಲು ಬಂದ ಏಜೆಂಟ್ ಆಹಾರ ನೀಡಲು ಪರಿಶೀಲನೆಗಾಗಿ OTP ನೀಡಿದ ನಂತರ ಒಮ್ಮೆಲೆ ಗದರಲು ಪ್ರಾರಂಭಿಸಿದ್ದಾರೆ.
ಈ ವೇಳೆ ದಿಗ್ಭ್ರಮೆಗೊಂಡ ವ್ಯಕ್ತಿ ಏನು ಎಂದು ವಿಚಾರಿಸಿದಾಗ ಡೆಲಿವರಿ ಏಜೆಂಟ್, ಹಬ್ಬದ ಋತುವಿನಲ್ಲಿ ಚಿಕನ್ ಬಿರಿಯಾನಿ ಬಿಟ್ಟು ಏನಾದರೂ ಶುದ್ಧವಾದದ್ದನ್ನು ತಿನ್ನಲು ಹೇಳಿದ್ದಾರೆ. ಈ ವೇಳೆ ಬಳಕೆದಾರ ತಪ್ಪಿತಸ್ಥನಗಿದ್ದರಿಂದ ಏನನ್ನು ಹೇಳದೇ ಕೇವಲ ಸ್ಮೈಲ್ ಮಾಡಿರುವುದಾಗಿ ತಿಳಿಸಿದ್ದಾನೆ.
ಏಜೆಂಟರ ಕೋಪದಿಂದ ತಾನು ಭಯಭೀತನಾಗಿದ್ದೇನೆ ಮತ್ತು ತನ್ನ ಆಹಾರವನ್ನು ಹಾಳುಮಾಡಬಹುದೆಂಬ ಆತಂಕವನ್ನು ಬಳಕೆದಾರರು ಒಪ್ಪಿಕೊಂಡರು. ನಾನು ಏನು ಮಾಡಬೇಕು? ನನ್ನ ಬಳಿ ಅವನ ಸಂಖ್ಯೆ ಮತ್ತು ಹೆಸರು ಇದೆ. ಅವನಿಗೆ ನನ್ನ ಮನೆ ತಿಳಿದಿದೆ ಎಂದು ತಿಳಿಸಿದ್ದಾರೆ.