ದೆಹಲಿ: ಧುರಂಧರ್ ದಿ ರಿವೆಂಜ್'(Dhurandhar 2) ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ಬರೆದಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ(Deepika Padukone) ಈ ಬಗ್ಗೆ ಎಲ್ಲಿಯೂ ಕೂಡಾ ಪೋಸ್ಟ್ ಹಂಚಿಕೊಂಡಿರಲಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಬಗ್ಗೆ ಏನನ್ನೂ ಬರೆದಿಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ.
ದೀಪಿಕಾ ಇದೀಗ ಟ್ರೋಲ್‌ಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮಲ್ಲಿ ಯಾರೊಬ್ಬರು ನೋಡುವ ಮೊದಲೇ ನಾನು ಚಿತ್ರವನ್ನು ನೋಡಿದೆ. ಈಗ ತಮಾಷೆ ಯಾರ ಬಗ್ಗೆ?’ ಎಂದು ಕಾಲೆಳೆದಿದ್ದಾರೆ.
ಇನ್ಸ್ಟಾಗ್ರಾಮ್ ಒಂದರಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋನ ಮಾರ್ಚ್ 23ರಂದು ಪೋಸ್ಟ್ ಮಾಡಲಾಗಿದೆ. ಅಂದರೆ, ‘ಧುರಂಧರ್ 2’ ರಿಲೀಸ್ ಆದ ಕೇವಲ ನಾಲ್ಕು ದಿನಕ್ಕೆ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ದೀಪಿಕಾ ‘ಧುರಂಧರ್ 2’ ಸಿನಿಮಾ ನೋಡಿಲ್ಲ ಎಂದು ಟೀಕಿಸಲಾಗಿತ್ತು.
ಇದಕ್ಕೆ ದೀಪಿಕಾ ಪಡುಕೋಣೆ ಕಮೆಂಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ‘ನೀವೆಲ್ಲರೂ ಸಿನಿಮಾ ನೋಡುವುದಕ್ಕೂ ಮೊದಲೇ ನಾನು ‘ಧುರಂಧರ್ 2’ ಚಿತ್ರವನ್ನು ನೋಡಿದ್ದೇನೆ. ನನ್ನನ್ನು ಮೂರ್ಖತನ ತೋರಿಸಲು ಬಂದು, ನಿಮ್ಮ ಮೂರ್ಖತನ ಬಯಲಾಗಿದೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಣವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರವನ್ನು ಈಗಾಗಲೇ ಬಾಲಿವುಡ್‌ನ ನಟ-ನಟಿಯಲು ಶ್ಲಾಘಿಸಿದ್ದಾರೆ. ಅನುಷ್ಕಾ ಶರ್ಮಾ, ಆಲಿಯಾ ಭಟ್ ಮತ್ತು ಕರಣ್ ಜೋಹರ್ ಅವರಂತಹ ತಾರೆಗಳು ಧುರಂಧರ್ 2 ಚಿತ್ರವನ್ನು ಹಾಡಿ ಹೊಗಳಿದ್ದರು. ಸಿನಿಮಾ ನೋಡುವವರೆಲ್ಲರೂ ಈಗಾಗಲೇ ಚಿತ್ರವನ್ನು ನೋಡಿಯಾಗಿದೆ. ಆದರೂ ದೀಪಿಕಾ ಮಾತ್ರ ಈ ವಿಷಯದಲ್ಲಿ ಸೈಲೆಂಟ್ ಆಗಿರುವುದು ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಈಗ ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.
ಇದನ್ನೂ ಓದಿ : ಭಾರತೀಯರು ಸಾಧ್ಯವಾದಷ್ಟೂ ಬೇಗ ಇರಾನ್ ಬಿಟ್ಟು ಹೊರಡಿ – ರಾಯಭಾರ ಕಚೇರಿ ಸೂಚನೆ