ಬೆಂಗಳೂರು : ರಾಜಧಾನಿ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ವಿವಿಧೆಡೆ ಮಳೆಯಾಗುತ್ತಿದ್ದು, ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿರುವವರಿಗೆ ಮಳೆರಾಯ ಬ್ರೇಕ್ ಹಾಕಿದಂತಾಗಿದೆ.
ಮಳೆಯಿಂದ ಸಿಲಿಕಾನ್ ಸಿಟಿಯಲ್ಲೂ ಪಟಾಕಿ ಸಿಡಿಸುವ ಸಂಭ್ರಮವು ದಿಢೀರ್ ತಣ್ಣಗಾಗಿದ್ದು, ವ್ಯಾಪಕ ಮಳೆ ಮುಂದುವರಿದಿದೆ. ಕಳೆದೆರಡು ವಾರಗಳ ಹಿಂದೆ ಸುರಿದ ಧಾರಾಕಾರ ವರ್ಷಧಾರೆಯಿಂದ ತತ್ತರಗೊಂಡಿದ್ದ ರಾಜಧಾನಿ ಮಂದಿಗೆ ಮತ್ತೆ ಮಳೆರಾಯ ಪ್ರವಾಹದ ಭೀತಿ ಮುಂದಿಟ್ಟಿದ್ದಾನೆ.
ಇನ್ನು ಪಟಾಕಿಯಿಂದ ದಟ್ಟ ಪ್ರಮಾಣದ ಹೊಗೆ ಆವರಿಸಿ ಮಾಲಿನ್ಯ ಉಂಟಾಗಿದ್ದನ್ನು ಇದೀಗ ವರುಣದೇವ ಹೊಗೆಯ ವಾತಾವರಣವನ್ನು ಶಮನ ಮಾಡಿದಂತೆ ಆಗಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬೆಂಗಳೂರು ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಲ್ಲೂ ದೀಪಾವಳಿ ಸಂಭ್ರಮಕ್ಕೆ ವರುಣದೇವ ಅಡ್ಡಗಾಲಿಟ್ಟಿದ್ದಾನೆ.