ಬೆಂಗಳೂರು: ಯುದ್ದದಲ್ಲಿ (War) ಸಿಲುಕಿರುವವರನ್ನ ನಾವು ಕಾಪಾಡಬೇಕು. ಕೇರಳ (Kerala), ಕರ್ನಾಟಕ (Karnataka) ಸೇರಿ ಎಲ್ಲಾ ಕಡೆಯಿಂದ ಹೋಗಿದ್ದಾರೆ. ಅವರನ್ನೆಲ್ಲಾ ರಕ್ಷಣೆ ಮಾಡಬೇಕು ಅಂತ ಹೇಳಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೆಹಲಿ ಕಮಿಷನರ್ ಗೆ ಸಂಪರ್ಕದಲ್ಲಿರಿ ಎಂದು ಹೇಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಇಸ್ರೇಲ್-ಇರಾನ್ ನಡುವೆ ಯುದ್ಧದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಮ್ಮ ಇಬ್ಬರು ಶಾಸಕರು, ಬೋಜೇಗೌಡ, ಎಸಿ ಶ್ರೀನಿವಾಸ ಕೂಡ ಸಿಲುಕಿಕೊಂಡಿದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನ ಪಡುತ್ತಿದ್ದೇವೆ. ಎಲ್ಲಾ ನಾಗರಿಕರಿಗೆ ರಕ್ಷಣೆ ಮಾಡಬೇಕು. ಏನು ನಡೀತಾ ಇದೆ ಅದು ಸರಿಯಿಲ್ಲ. ನಮ್ಮ ದೇಶ ಶಾಂತಿ.. ನಾವೆಲ್ಲಾ ಶಾಂತಿ , ನೆಮ್ಮದಿಯಿಂದ ಬಂದಿದ್ದೇವೆ. ಇವತ್ತು ದಾಳಿ ನಡೀತಾ ಇರೋದು ಸರಿಯಿಲ್ಲ. ಮಕ್ಕಳ ಶಾಲೆ ಮೇಲೆ ದಾಳಿ ಮಾಡಿದ್ದು ಖಂಡನೀಯ. ನಾವು ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರಕ್ಕೆ ನಾವು ಒತ್ತಡ ಹೇರಬೇಕು. ನಾವು ಆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕನ್ನಡ ಸಂಘಟನೆಗಳಿಗೆ ಮನವಿ ಮಾಡುತ್ತೇವೆ. ಆತ್ಮಧೈರ್ಯ ತುಂಬುವ ಕೆಲಸ ಮಾಡಿ. ಅನೇಕರು ನಮಗೆ ಫೋನ್ ಮಾಡಿ ಗಾಬರಿ ಆಗಿದ್ದಾರೆ. ರಾತ್ರಿ ಏರ್ ಸ್ಟ್ರೈಕ್ ಆಗಿದೆ, ಜನ ಭಯ ಆಗಿದ್ದಾರೆ. ಅದರಿಂದ ನಾವು ಆತಂಕ ಪಡುವ ಆಗಿಲ್ಲ. ನಾನು ಸಿಎಂ ಕೂಡ ಸಂಪರ್ಕ ಮಾಡುತ್ತೇವೆ. ಕೇಂದ್ರ, ರಾಜ್ಯ ಸರ್ಕಾರ ಬೇರೆ ಹೆಲ್ತ್ ಲೈನ್ ಮಾಡೋಕೆ ಆಗಲ್ಲ. ನಾವು ಕೂಡ ರಾಜ್ಯ ಸರ್ಕಾರದಿಂದ ನಿರ್ದೇಶನ ಕೊಟ್ಟಿದ್ದೇವೆ. ಏನೇ ಬಂದರೂ ವಿದೇಶಾಂಗ ಇಲಾಖೆಯಿಂದಲೇ ಮಾಡಬೇಕು. ನಾವು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ದೇವೆಗೌಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅಗತ್ಯ ಏನಿಲ್ಲ, ಅವರ ಆರೋಗ್ಯ ನೋಡಿಕೊಳ್ಳಲಿ. ಅವರ ಹೋರಾಟ ಅವರು ಮಾಡಲಿ ಎಂದರು.
ಇದನ್ನೂ ಓದಿ: ಒಳಮೀಸಲಾತಿ ಕಿಚ್ಚು, ರಾಜೀನಾಮೆಯ ವಿಚಾರ ಪ್ರಸ್ತಾಪಿಸಿದ ಸಚಿವ ಕೆ.ಹೆಚ್.ಮುನಿಯಪ್ಪ
ಒತ್ತಡ ಹಾಕುವುದಕ್ಕಿಂತ ಬೇರೆ ಆಪ್ಶನ್ ಇಲ್ಲ. ಹಿಂದೆ ಹೋಗಿ ಕೆಲ ತಪ್ಪುಗಳಾಗಿವೆ. ಈಗಾಗಲೇ ಅವಾರ್ಡ್ ಕೊಟ್ಟಿದೆ. ಇದರಲ್ಲಿ ಯಾರಾದ್ರೂ ಇಂಟರ್‌ಫಿಯರ್ ಆಗಬೇಕಲ್ಲ. ಅದಕ್ಕೆ ನಾವು ಎಲ್ಲರನ್ನ ಒಟ್ಟಿಗೆ ಕೊಂಡೊಯ್ಯುತ್ತೇವೆ. ಪತ್ರ ವ್ಯವಹಾರದ ಬಗ್ಗೆ ಸಿಎಂಗೆ ತಿಳಿಸಿದ್ದೇನೆ. ಮೇಕೆದಾಟು ವಿಚಾರದಲ್ಲೂ ನಮಗೆ ಇದೇ ಆಗುತ್ತಿದೆ. ಆರ್ಡರ್ ಬಗ್ಗೆ ಸುಪ್ರೀಂಗೆ ಹೋಗಬಾರದಿತ್ತು. ಅದು ರಾಂಗ್ ಡಿಶಿಷನ್. ಕೋರ್ಟ್ ಗೆ ಹೋದ್ರೆ ಮೊಸಳೆ ಬಾಯಿಗೆ ಕೊಟ್ಟಂತೆ ಎಂದು ಹೇಳಿದರು.