Thursday, March 12, 2026
Homeಟಾಪ್ ನ್ಯೂಸ್DK SHIVAKUMAR: ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮಾಡೋನು ನಾನು- ಡಿಸಿಎಂ ಡಿಕೆಶಿ ಹೀಗಂದಿದ್ಯಾಕೆ..?

DK SHIVAKUMAR: ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮಾಡೋನು ನಾನು- ಡಿಸಿಎಂ ಡಿಕೆಶಿ ಹೀಗಂದಿದ್ಯಾಕೆ..?

ಬೆಂಗಳೂರು: ನೋ ವ್ಯಕ್ತಿ ಪೂಜೆ, ಪಕ್ಷ (Party) ಪೂಜೆ ಮಾಡೋನು ನಾನು. ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ‌ ನಂಬಿಕೆಯಿಟ್ಟವನು ಎಂದು ಡಿಸಿಎಂ (DCM) ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ‌ ಬೇರೆ ಯಾರೂ ಅಲ್ಲ, ನಮ್ಮ ಪಾರ್ಟಿಯ ಸೀನಿಯರ್ ಲೀಡರ್. ನಾನೊಬ್ಬನೇ ಪಾರ್ಟಿ ಕಟ್ಟಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಕಟ್ಟಿರೋದು. ಸರ್ಕಾರವನ್ನು ಉಳಿಸಿಕೊಂಡು ಹೋಗಲು ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.

ನನ್ನ ಸಂಖ್ಯೆ 140: ನಾನು ಸತೀಶ್ ಒಳ್ಳೆ ಸ್ನೇಹಿತರು, ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿದೆ. ಇಬ್ಬರೂ ದುಡಿಯುತ್ತಿದ್ದೇವೆ. ಪಕ್ಷಕ್ಕೆ ಅವರು ಆಸ್ತಿ. ರಾಹುಲ್ ಗಾಂಧಿಯವರು ನನಗೆ ಏನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳೋಕಾಗಲ್ಲ. ನಾನು ಮಾಧ್ಯಮಗಳ ಮುಂದೆ ಏನನ್ನೂ ಚರ್ಚೆ ಮಾಡಲ್ಲ. ಯಾವುದೇ ರಾಜಕೀಯ ಚರ್ಚೆ ಮಾಡಲ್ಲ. ನನ್ನದು ಯಾವ ಬಣವೂ ಇಲ್ಲ, ಕಾಂಗ್ರೆಸ್ ಬಣ. ನನ್ನ ಸಂಖ್ಯೆ 140 ಎಂದು ಡಿಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಡಿ.1ಕ್ಕೆ ಡಿಕೆಶಿ ‘CM’ ಆಗಿ ಪ್ರಮಾಣ ವಚನ ಸ್ವೀಕಾರ?, ಹೈಕಮಾಂಡ್​ನಿಂದ ಬಂತಾ ಸಂದೇಶ..?

ಸಚಿವ ಜಮೀರ್ ಅಹ್ಮದ್​, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ‌ ಎಲ್ಲ ಭೇಟಿ‌ ಮಾಡಿದ್ದರು. ಪಕ್ಷದ ಬಲವರ್ಧನೆಗೆ ಭೇಟಿಯಾಗಿದ್ದೇವೆ ಅಷ್ಟೇ. ಬಿಜೆಪಿಯವರು ಏನೇನೋ ಹೇಳ್ತಾರೆ. ಆದರೆ ನಾವು 140 ಮಂದಿ ಒಟ್ಟಾಗಿದ್ದೇವೆ. ಯಾರೂ ಅಲ್ಲಾಡಿಸಲು ಆಗಲ್ಲ. ಸದಾನಂದ ಗೌಡ್ರು ಏನೋ ಹೇಳಿದ್ದಾರೆ. ಪಾಪ ಅವರಿಗೆ ನನ್ನ ಇತಿಹಾಸ ಗೊತ್ತಿಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗ ಎಂದು ಡಿಕೆಶಿ ತಿಳಿಸಿದ್ದಾರೆ.

ಆರ್‌ ಅಶೋಕ್‌ಗೆ ತಿರುಗೇಟು: ಎರಡೂವರೆ ವರ್ಷ ಅಂತ ಏನಿಲ್ಲ, ನನ್ನ ವೈಯಕ್ತಿಕ ಏನಿಲ್ಲ, ಎಲ್ಲವೂ ಪಕ್ಷದ ತೀರ್ಮಾನ. ನಾನು ಸಿಎಂ ಎಲ್ಲರೂ ಸೇರಿ ಸರ್ಕಾರವನ್ನು ತಂದಿದ್ದೇವೆ. ದೆಹಲಿಗೆ ಹೋಗುವುದು ನನಗೆ ಗೊತ್ತಿಲ್ಲ. ನ. 28 ರಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರ್ಯಕ್ರಮ ಇದೆ. ನ. 29 ಇನ್ನೂ ದೂರ ಇದೆ. ನಾನು ಒಕ್ಕಲಿಗ ನಾಯಕ ಅಂತ ಹೇಳಿಲ್ಲ. ನಾನು ಕಾಂಗ್ರೆಸ್ ನಾಯಕ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ನಾವು ಬಿಟ್ಟರೂ ಜಾತಿ, ಧರ್ಮ ಬಿಡಲ್ಲ. ಅಶೋಕಣ್ಣ ಚಕ್ರವರ್ತಿ, ಸಾಮ್ರಾಟ್ ಎಂದು ಬೇಕಾದರೆ ಬೋರ್ಡ್ ಹಾಕಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಅಶೋಕ್‌ ಹೇಳಿದ್ದೇನು..?: ವಿಜಯನಗರದ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಪಕ್ಷ ನಾಯಕ ಆರ್‌ ಅಶೋಕ್‌ ಅವರು, ಡಿಕೆಶಿ ಯಾವಾಗ ಒಕ್ಕಲಿಗ ನಾಯಕರಾಗಿದ್ದರು? ಕುಕ್ಕರ್ ಬಾಂಬ್‌ನವರನ್ನು ಅವರು ಬ್ರದ‌ರ್ ಎಂದು ಹೇಳಿದವರು. ಅದಿಲ್ಲವಾಗಿದ್ದರೆ ನಮ್ಮನ್ನು ಬ್ರದ‌ರ್ ಎನ್ನುತ್ತಿದ್ದರು. ಅವರು ಸಾಬರಿಗೆ ಮಾತ್ರ ಬ್ರದರ್ ಹೊರತು ನಮಗಲ್ಲ. ಹೀಗಾಗಿ ಅವರನ್ನು ಒಕ್ಕಲಿಗ ನಾಯಕ ಎಂದು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!