ಬೆಂಗಳೂರು: ನಾನು ಕೆಪಿಸಿಸಿ (KPCC) ಅಧ್ಯಕ್ಷರಾಗಿ 6 ವರ್ಷ ಮುಗಿಸಿದ್ದೇನೆ. ನಾನೀಗ ಹಿರಿಯನಾಗಿದ್ದು. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಾಕು. ಹೊಸ ಬ್ಲಡ್ (New Blood) ಬರಬೇಕು. ಹೊಸ ಆಲೋಚನೆಗಳು (New Thinking) ಬರಬೇಕು ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಹೊಸ ಬ್ಲಡ್ ಬರಬೇಕು. ಹೊಸ ಆಲೋಚನೆ ಬರಬೇಕು. ಸಾಕು ಆರು ವರ್ಷ ಮುಗಿಸಿದ್ದೇನೆ. ನಾನು ಬಸ್ ಗೆ 1 ಕೋಟಿ ಚೆಕ್ ಕೊಟ್ಟವನು ದೇಶಕ್ಕೆ ಒಂದು ಸಂದೇಶ ಕೊಟ್ಟವನು. ರೈಲು ಚಾರ್ಜ್,ಬಸ್ ಚಾರ್ಜ್ ಕಡಿಮೆ ಮಾಡಿಸಿದವನು. ನಾವು ಹೋರಾಟ ಮಾಡಿ ಬಂದವರು. ಪವರ್ ಗಾಗಿ ನಾನು ಹೋರಾಟ ಮಾಡಿದವನಲ್ಲ. ನಾನು ಸ್ಟ್ರೀಟ್ ಫೈಟರ್. ನನಗೆ ಯಾವಾಗ ಬರಬೇಕೋ ಅದು ಬರುತ್ತೆ. ಅಧ್ಯಕ್ಷರ ಅವಧಿ ನಾನೇ ಸಿಎಂ ಜೊತೆ ಚರ್ಚಿಸಿ ಮುಂದುವರಿಸಿದ್ದೇವೆ ಹೊಸಬರಿಗೂ ಅವಕಾಶ ಕೊಡ್ತೇವೆ ಎಂದರು.
ಇನ್ನು ನನಗೆ ಒಳ್ಳೆಯದಾಗಬೇಕಿದ್ರೆ ಶಾಸಕರು ಎಲ್ಲರು ಸುಮ್ಮನಿರಿ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣ ಮಾರ್ಚ್ 10 ಕ್ಕೆ ನಾನು ಡಿನ್ನರ್ ಇಟ್ಟಿದ್ದೇನೆ. ನಮ್ಮ ಶಾಸಕರು, ಎಂಎಲ್ ಸಿಗಳನ್ನ ಕರೆಯುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಫೋನ್‌ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 175 ಜನ ಎಂಎಲ್ ಎಎಂಎಲ್ ಸಿ ಇದ್ದಾರೆ. ಮೋದಿ ಸಾಹೇಬ್ರು ಆಗಲಿಲ್ವೇ. ಹಿಂದೆ ಇಲ್ಲ ಮುಂದೆ ಇಲ್ಲ ಬಂದು ಆಗಲಿಲ್ವಾ…? ಸಿಎಂ ಇದ್ದಾರೆ, ಹೋಂಮಿನಿಸ್ಟರ್ ಇದ್ದಾರೆ ನನ್ನ ಬೆಂಗಾವಲಿಗೆ ಪೊಲೀಸರು ಇದ್ದಾರೆ. ನಾನು ಹಿಂದೇ ಏನೋ ಕೇಳಿದ್ದೆ. ಸ್ವಾಮಿಗಳದ್ದು ಏನೋ ಅಂತ, ಆಗ ನಾನು ಸರ್ಕಾರದ ಭಾಗವಾಗಿರಲಿಲ್ಲ ಆಗಲೇ ನಾನು ಬಿಟ್ಟು ಬಿಟ್ಟಿದ್ದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ ಸಾಲರಾಮಯ್ಯ.. ವ್ಯಂಗ್ಯವಾಡಿದ್ದೇಕೆ ಜೆಡಿಎಸ್? ಯಾವ ಸಿಎಂ ಎಷ್ಟು ಸಾಲ ಮಾಡಿದ್ರು?
ನಾನು ಇವತ್ತಿನವರೆಗೂ ಚೀಪ್ ಮಿನಿಸ್ಟರ್ ವಿಚಾರ ಮಾತನಾಡಿಲ್ಲ. ನಾನುಂಟು, ಚೀಪ್ ಮಿನಿಸ್ಟರ್ ಉಂಟು. ಖಾಲಿ ಆಗ್ತಾರೆ, ಇಳೀತಾರೆ ಅಂತ ಹೇಳಿಲ್ಲ. ನಾನು ಖಾಲಿ ವಿಚಾರ ಮಾತನಾಡೇ ಇಲ್ಲ ನಾನೊಬ್ಬ ಪಕ್ಷದ ಅಧ್ಯಕ್ಷನಾಗಿದ್ದೇನೆ. ಕುರ್ಚಿಯಲ್ಲಿ ಕುಳಿತು ಆ ಸ್ಥಾನಕ್ಕೆ ಪಾಯಿಂಟ್ ಔಟ್ ಮಾಡಬಾರದು ಪಕ್ಷಕ್ಕೆ ಅನ್ಯಾಯ ಮಾಡ್ತಿದ್ದೀಯ ಅಂತ ಹೇಳಬಾರದು. ಸರಿಯಾಗ್ತಿದ್ಯೋ ಏನೋ ಗೊತ್ತಿಲ್ಲ ಎಂದರು.
ನಾವು ಸ್ಯಾಕ್ರಿಫೈಸ್ ಮಾಡಬೇಕು ನಮ್ಮಿಂದ ಲಕ್ಷಾಂತರ ಕಾರ್ಯಕರ್ತರಿಗೆ ತೊಂದರೆಯಾಗುತ್ತೆ. ನಮ್ಮ ಸ್ವಾರ್ಥಕ್ಕಾಗಿ ಪಾರ್ಟಿಗೆ ತೊಂದರೆ ಮಾಡಲ್ಲ. ಸಿಎಂ ಅವರು ಅನುಭವದ ಮಾತು ಹೇಳಿದ್ದಾರೆ. ನನ್ನನ್ನ ಅವರು ಹತ್ತಿರದಿಂದ ನೋಡಿದ್ದಾರೆ. ಬೇರೆ ಪಾರ್ಟಿಯಲ್ಲಿ ಇದ್ದಾಗಲು ನೋಡಿದ್ದಾರೆ ನಮ್ಮ ಪಾರ್ಟಿಗೆ ಬಂದ ಮೇಲೂ ನೋಡಿದ್ದಾರೆ. ನಮ್ಮಿಬ್ಬರು ಹಾಲುಜೇನಿನ ಸಂಬಂಧವೇ ಖಂಡಿತ 2015 ರಲ್ಲೂ ಹಾಗೆ ಇತ್ತು 2028 ಕ್ಕೂ ಹಾಗೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.