Saturday, April 26, 2025
Homeಟಾಪ್ ನ್ಯೂಸ್BENGALURU: ಸಿಲಿಕಾನ್‌ ಸಿಟಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪಬ್‌ಗಳಿಗೆ ಅನುಮತಿ- ಡಿಕೆಶಿ ಪರೋಕ್ಷ ಸುಳಿವು!‌

BENGALURU: ಸಿಲಿಕಾನ್‌ ಸಿಟಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪಬ್‌ಗಳಿಗೆ ಅನುಮತಿ- ಡಿಕೆಶಿ ಪರೋಕ್ಷ ಸುಳಿವು!‌

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪಬ್‌ಗಳಿಗೆ ಅನುಮತಿ ‌ಕೊಡುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪರೋಕ್ಷ ಸುಳಿವು ಕೊಟ್ಟಿದ್ದಾರೆ‌.

ಬೆಂಗಳೂರಿನಲ್ಲಿ ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುವ ನಿಯಮ ಇದೆ. ಆದ್ರೆ ಮಧ್ಯರಾತ್ರಿವರೆಗೂ ಪಬ್ ಗಳು ನಡೆಯುತ್ತಿವೆ. ಇಂದಿರಾ‌ನಗರ ಸೇರಿ ಅನೇಕ ಕಡೆ ನಿಯಮ ಮೀರಿ ಪಬ್ ನಡೆಯುತ್ತಿವೆ. ಇದನ್ನೇ ನೆಪ ಇಟ್ಟುಕೊಂಡು ಪೊಲೀಸರು ಪಬ್ ಅವರಿಗೆ ಕಿರುಕುಳಕೊಡುವ ಕೆಲಸ ಮಾಡ್ತಿದ್ದಾರೆ. ರೆಸ್ಟೋರೆಂಟ್‌ಗಳಿಗೆ ರಾತ್ರಿ 1 ಗಂಟೆವರೆಗೂ ಸರ್ಕಾರ ಅವಕಾಶ ಕೊಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಪಬ್ ಗಳಿಗೂ ರಾತ್ರಿ 1 ಗಂಟೆವರೆಗೂ ಅವಕಾಶ ಕೊಡಿ ಎಂದು ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಮನವಿ ಮಾಡಿದರು.‌

ಇದೇ ವೇಳೆ ಮಧ್ಯ ಪ್ರವೇಶಿಸಿದ ಡಿಕೆಶಿ, ಅಬಕಾರಿ ಸಚಿವರು ಅಬಕಾರಿ ನಿಯಮದ ಆದೇಶದ ಬಗ್ಗೆ ಮಾತಾಡ್ತಿದ್ದಾರೆ. ಸಚಿವರು ಹೇಳಿದಂತೆ ಈಗ ಯಾರು ರಾತ್ರಿ 11.30ಕ್ಕೆ ಪಬ್ ಕ್ಲೋಸ್ ಮಾಡಲ್ಲ. ಇದನ್ನೇ ಪೊಲೀಸರು ಬಂಡವಾಳ ಮಾಡಿಕೊಂಡು ಕಿರುಕುಳ ‌ಕೊಡ್ತಿದ್ದಾರೆ‌. ನನಗೂ ಕೂಡ ಪಬ್ ಅವಧಿ ವಿಸ್ತರಣೆ ಮಾಡುವ ಬಗ್ಗೆ ಬೇಡಿಕೆ ಬಂದಿವೆ. ರಾತ್ರಿ ಒಂದು ಗಂಟೆವರೆಗೂ ಪಬ್‌ಗಳಿಗೆ ಅವಕಾಶ ಕೊಡುವ ಗೋಪಿನಾಥ್ ಸಲಹೆ ಕರೆಕ್ಟ್ ಇದೆ. ನಾನು ಅದನ್ನ ಒಪ್ಪುತ್ತೇನೆ. ನಾನು, ಗೃಹ ಸಚಿವರು ಅಬಕಾರಿ ಸಚಿವರು ಸಭೆ ಮಾಡಿ ಇದಕ್ಕೊಂದು ಪರಿಹಾರ ಮಾಡುತ್ತೇವೆ ಎನ್ನುವ ಮೂಲಕ ಪಬ್ ಗಳ ಅವಧಿ ವಿಸ್ತರಣೆ ಮಾಡುವ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!