ವಯನಾಡ್: ‘ರಾಹುಲ್ ಗಾಂಧಿ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗಿಲ್ಲ” . ಹೀಗೆಂದಿದೆ ಚುನಾವಣಾ ಆಯೋಗ.
ಹೌದು ಇಂತಹ ಎಕ್ಸ್ ಕ್ಲೂಸಿವ್ ಸುದ್ದಿ ಹರಿದಾಡ್ತಿದೆ. ಆದರೆ ಈ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ ರಾಹುಲ್ ಅಲ್ಲ ಅದರೆ ಇದು ರಾಹುಲ್ ಗಾಂಧಿ S/O ವಲ್ಸಮ್ಮ.
2019ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಈ ರಾಹುಲ್ ಗಾಂಧಿ 2000ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಇಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರ್ಜರಿ ಜಯ ಸಾಧಿಸಿದ್ದರು. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹ ಪ್ರಕರಣ ಸುದ್ದಿಯಾಗುತ್ತಿರುವ ನಡುವೆ ಸ್ವತಂತ್ರ ಅಭ್ಯರ್ಥಿ ರಾಹುಲ್ ಗಾಂಧಿ ಇನ್ನು ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಆಯೋಗ ಆದೇಶಿಸಿದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ಚುನಾವಣಾ ವೆಚ್ಚದ ಮಾಹಿತಿ ನೀಡದೇ ಇರೋದು.
ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿ ಯಾವುದೇ ಅಭ್ಯರ್ಥಿ ನಿಗದಿತ ಅವಧಿಯ ಒಳಗೆ, ನಿಗದಿತ ನಮೂನೆಯಲ್ಲಿ ಚುನಾವಣಾ ವೆಚ್ಚ ಬಹಿರಂಗಪಡಿಸಲು ವಿಫಲವಾದಲ್ಲಿ ಮತ್ತು ಈ ವೈಫಲ್ಯಕ್ಕೆ ಸಕಾರಣ ಇಲ್ಲದೇ ಇದ್ದಲ್ಲಿ ಆಯೋಗವು ಆತ/ಆಕೆಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಬಹುದು. ಅದೇ ರೀತಿ ಪಕ್ಷೇತರ ಅಭ್ಯರ್ಥಿ ರಾಹುಲ್ ಗಾಂಧಿಯವರಿಗೆ ನಿರ್ಬಂಧ ಹೇರಲಾಗಿದೆ.