Thursday, April 16, 2026
Homeಟಾಪ್ ನ್ಯೂಸ್BY ELECTION : ನಾಳೆ ರಾಜ್ಯದಲ್ಲಿ ಉಪಚುನಾವಣೆ - ನೀವೇನಾದರೂ ಮೊದಲ ಬಾರಿ ವೋಟ್ ಹಾಕುವುದಾದರೆ...

BY ELECTION : ನಾಳೆ ರಾಜ್ಯದಲ್ಲಿ ಉಪಚುನಾವಣೆ – ನೀವೇನಾದರೂ ಮೊದಲ ಬಾರಿ ವೋಟ್ ಹಾಕುವುದಾದರೆ ಈ ಬಗ್ಗೆ ಇರಲಿ ಗಮನ! 

ರಾಜ್ಯದ ಹಿರಿಯ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ (Davangere South) ಮತ್ತು ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರಗಳಿಗೆ ನಾಳೆ (ಏಪ್ರಿಲ್ 9) ಉಪಚುನಾವಣೆ (By Election)ಮತ್ತು ನಡೆಯಲಿದೆ. ಒಂದು ವೇಳೆ ನೀವೇನಾದರೂ ಈ ಬಾರಿ ಮೊದಲ ಬಾರಿಗೆ ಮತ (Voting) ಹಾಕುತ್ತಿದ್ದರೆ, ಮತಗಟ್ಟೆಗೆ ಹೋಗುವ ಮುನ್ನ ಈ ಸರಳ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ..

voting davangere-bagalkot-by election-first-time-voters-must-know-rules voting

ಮತದಾರರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡಿಕೊಳ್ಳಿ 

ಮತದಾನದ ದಿನದಂದು ಮತಗಟ್ಟೆಗೆ ಹೋಗುವ ಮೊದಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎನ್‌ವಿಎಸ್‌ಪಿ (NVSP) ಪೋರ್ಟಲ್ ಅಥವಾ ‘ವೋಟರ್ ಹೆಲ್ಪ್‌ಲೈನ್’ ಆಪ್ ಮೂಲಕ ನಿಮ್ಮ ಎಪಿಕ್ (EPIC) ಸಂಖ್ಯೆ ಬಳಸಿ ಹೆಸರು ಮತ್ತು ಮತಗಟ್ಟೆಯ ವಿವರಗಳನ್ನು ನೀವು ಸುಲಭವಾಗಿ ಪಡೆಯಬಹುದು. ಇದು ಮತದಾನದ ದಿನದ ಗೊಂದಲವನ್ನು ತಪ್ಪಿಸುತ್ತದೆ.

ಮತದಾರರಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ? 

ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹ ದಿನಾಂಕದ ವೇಳೆಗೆ ನಿಮಗೆ ಕನಿಷ್ಠ 18 ವರ್ಷ ತುಂಬಿರಬೇಕು. ನೀವು ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳದಿದ್ದರೆ, ಎನ್‌ವಿಎಸ್‌ಪಿ (NVSP) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲಿ ಫಾರ್ಮ್ 6 ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಬಳಸಿ ನೋಂದಣಿ ಮಾಡಿಕೊಳ್ಳಬಹುದು. 

voting davangere-bagalkot-by election-first-time-voters-must-know-rules voting

ವೈಯಕ್ತಿಕ ವಿವರಗಳ ಜೊತೆಗೆ ಆಧಾರ್ ಕಾರ್ಡ್ ಅಥವಾ ವಿಳಾಸದ ಪುರಾವೆಯನ್ನು ಅಪ್‌ಲೋಡ್ ಮಾಡುವ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ಮುಗಿಸಬಹುದು. ಆನ್‌ಲೈನ್ ಸಾಧ್ಯವಾಗದಿದ್ದರೆ ನಿಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಫಾರ್ಮ್ 6 ಅನ್ನು ಸಲ್ಲಿಸುವ ಮೂಲಕ ಆಫ್‌ಲೈನ್‌ನಲ್ಲಿಯೂ ನೋಂದಾಯಿಸಿಕೊಳ್ಳಬಹುದು.

ಗುರುತಿನ ಚೀಟಿ ಮರೆಯಬೇಡಿ 

ಮತದಾನ ಮಾಡಲು ಹೋಗುವಾಗ ಮತದಾರರ ಗುರುತಿನ ಚೀಟಿ (Voter ID) ಇರುವುದು ಕಡ್ಡಾಯ. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಇಲ್ಲದಿದ್ದರೆ ಚಿಂತಿಸಬೇಡಿ. ಕೇಂದ್ರ ಚುನಾವಣಾ ಆಯೋಗವು ಅನುಮತಿಸಿರುವ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಭಾವಚಿತ್ರವಿರುವ ಬ್ಯಾಂಕ್ ಪಾಸ್‌ಬುಕ್‌ಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ನೀವು ಮತ ಚಲಾಯಿಸಬಹುದು.

voting davangere-bagalkot-by election-first-time-voters-must-know-rules voting

 

ಮತಗಟ್ಟೆಯಲ್ಲಿನ ಪ್ರಕ್ರಿಯೆ ಹೀಗಿರುತ್ತದೆ:

  • ನೀವು ಮತಗಟ್ಟೆ ಪ್ರವೇಶಿಸಿದಾಗ ಮೊದಲ ಅಧಿಕಾರಿ ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಪರಿಶೀಲಿಸುತ್ತಾರೆ.
  • ಎರಡನೇ ಅಧಿಕಾರಿ ನಿಮ್ಮ ಎಡಗೈ ಬೆರಳಿಗೆ ಶಾಯಿ (ಇಂಕ್) ಹಚ್ಚುತ್ತಾರೆ.
  • ನಂತರ ನೀವು ಮತದಾನದ ಕೊಠಡಿಯೊಳಗೆ ಹೋಗಿ ಇವಿಎಂ (EVM) ಯಂತ್ರದಲ್ಲಿ ನಿಮ್ಮ ನೆಚ್ಚಿನ ಅಭ್ಯರ್ಥಿಯ ಹೆಸರಿನ ಮುಂದಿರುವ ‘ನೀಲಿ ಗುಂಡಿ’ಯನ್ನು ಒತ್ತಬೇಕು.
  • ಗುಂಡಿ ಒತ್ತಿದ ತಕ್ಷಣ ಪಕ್ಕದಲ್ಲಿರುವ ವಿವಿಪ್ಯಾಟ್ (VVPAT) ಯಂತ್ರದಲ್ಲಿ ಒಂದು ಚೀಟಿ ಕಾಣಿಸಿಕೊಳ್ಳುತ್ತದೆ. ನೀವು ಯಾರಿಗೆ ಮತ ಹಾಕಿದ್ದೀರೋ ಅವರ ಹೆಸರೇ ಅದರಲ್ಲಿ ಇದೆಯೇ ಎಂದು 7 ಸೆಕೆಂಡ್‌ಗಳ ಕಾಲ ಪರಿಶೀಲಿಸಬಹುದು.

voting davangere-bagalkot-by election-first-time-voters-must-know-rules voting

ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರುತ್ತದೆ. ಬಿಸಿಲಿನ ತಾಪ ಹೆಚ್ಚಾಗುವ ಮುನ್ನ ಅಂದರೆ ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ನಿಮ್ಮ ಹಕ್ಕನ್ನು ಚಲಾಯಿಸುವುದು ಉತ್ತಮ. ಒಂದು ವೇಳೆ ನೀವು ಸಂಜೆ 6 ಗಂಟೆಗೆ ಸರತಿ ಸಾಲಿನಲ್ಲಿ ನಿಂತಿದ್ದರೂ ಸಹ, ಮತದಾನ ಮುಗಿಯುವವರೆಗೂ ನಿಮಗೆ ಅವಕಾಶ ನೀಡಲಾಗುತ್ತದೆ.

ಎರಡೂ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ ಚಲಾವಣೆಯಾಗುವ ಮತಗಳ ಎಣಿಕೆ ಮೇ 4 ರಂದು ನಡೆಯಲಿದ್ದು, ಅಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!