Saturday, May 16, 2026
Homeಟಾಪ್ ನ್ಯೂಸ್DAVANAGERE: ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಪದಚ್ಯುತಿ, ಕಾರಣಗಳ ಪಟ್ಟಿ ಕೊಟ್ಟ ಧರ್ಮದರ್ಶಿಗಳು

DAVANAGERE: ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಪದಚ್ಯುತಿ, ಕಾರಣಗಳ ಪಟ್ಟಿ ಕೊಟ್ಟ ಧರ್ಮದರ್ಶಿಗಳು

ದಾವಣಗೆರೆ : ಹರಿಹರ (Harihara) ಪಂಚಮಸಾಲಿ ಪೀಠದಲ್ಲಿ (Panchamasali peet) ವಚನಾನಂದ ಸ್ವಾಮೀಜಿಯವರನ್ನು (Vachanananda swamiji) ಮಠದಿಂದ ಹೊರಹಾಕುವ (Expulsion) ನಿರ್ಧಾರ ಭಾರಿ ಸಂಚಲನ ಮೂಡಿಸಿದೆ. ಮಠದ ಟ್ರಸ್ಟ್ ಸದಸ್ಯರು ಶ್ರೀಗಳ ವಿರುದ್ಧ ಹಣಕಾಸಿನ ಅವ್ಯವಹಾರ ಮತ್ತು ಆಡಳಿತಾತ್ಮಕ ವೈಫಲ್ಯದಂತಹ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಸುಮಾರು ಹತ್ತು ಪ್ರಮುಖ ಕಾರಣಗಳನ್ನು ಮುಂದಿಟ್ಟು ಈ ಕ್ರಮ ಕೈಗೊಳ್ಳಲಾಗಿದ್ದು, ಮಠದ ಆಸ್ತಿ ಪಾಸ್ತಿ ರಕ್ಷಣೆ ಮತ್ತು ಪಾರದರ್ಶಕತೆಯ ಉದ್ದೇಶದಿಂದ ಈ ನಿರ್ಧಾರ ಅನಿವಾರ್ಯವಾಯಿತು ಎಂದು ಟ್ರಸ್ಟಿಗಳು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಪಂಚಮಸಾಲಿ ಸ್ವಾಮೀಜಿಗಳೇ ಟಾರ್ಗೆಟ್, ವಚನಾನಂದ ಸ್ವಾಮೀಜಿ ಸ್ಫೋಟಕ ಆರೋಪ

ಶ್ರೀಗಳು ಮಠದ ಅಭಿವೃದ್ಧಿಗೆ ಬರುವ ದೇಣಿಗೆಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ.ಇಲ್ಲಿಗೆ ಬರುವ ದೇಣಿಗೆಗಳನ್ನು ಶ್ವಾಸಪೀಠಕ್ಕೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದಿಷ್ಟೇ ಅಲ್ಲದೇ ಸಮಾಜದ ಮುಖಂಡರೊಂದಿಗೆ ಸಮನ್ವಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಪೀಠದ ಆಡಳಿತ ಮಂಡಳಿಯ ವಾದವಾಗಿದೆ. ಮಠದ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ. ಈ ಘಟನೆಯು ಪಂಚಮಸಾಲಿ ಸಮಾಜದಲ್ಲಿ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದ್ದು, ಶ್ರೀಗಳ ಬೆಂಬಲಿಗರು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.

ಈ ವಿವಾದದ ಕೇಂದ್ರಬಿಂದು ಹಣಕಾಸಿನ ಲೆಕ್ಕಾಚಾರದ ಪಾರದರ್ಶಕತೆಯಾಗಿದೆ. ಮಠದ ಕೋಟ್ಯಂತರ ರೂಪಾಯಿ ನಿಧಿಯ ದುರ್ಬಳಕೆಯ ಆರೋಪ ಮತ್ತು ಮಠದ ಆಡಳಿತದಲ್ಲಿ ಶ್ರೀಗಳು ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಟ್ರಸ್ಟಿಗಳು ಕಟುವಾಗಿ ಟೀಕಿಸಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಮಠದ ಭವಿಷ್ಯವನ್ನು ರಕ್ಷಿಸಲು ಶಿಸ್ತು ಕ್ರಮ ಅನಿವಾರ್ಯವೆಂದು ಮಂಡಳಿಯು ಈ ಕಠಿಣ ನಿರ್ಧಾರವನ್ನು ಪ್ರಕಟಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!