Thursday, April 16, 2026
Homeಟಾಪ್ ನ್ಯೂಸ್DARSHAN RELEASE : ದರ್ಶನ್ ರಿಲೀಸ್ ವೇಳೆ ಟಿವಿಗೆ ಮುತ್ತಿಟ್ಟ ಮಹಿಳೆ - ಅಭಿಮಾನಿ ಸಂಭ್ರಮದ...

DARSHAN RELEASE : ದರ್ಶನ್ ರಿಲೀಸ್ ವೇಳೆ ಟಿವಿಗೆ ಮುತ್ತಿಟ್ಟ ಮಹಿಳೆ – ಅಭಿಮಾನಿ ಸಂಭ್ರಮದ ವಿಡಿಯೋ ವೈರಲ್ – VIDEO !

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬರೋಬ್ಬರಿ 132 ದಿನಗಳ ಕಾಲ ಜೈಲು ವಾಸ ಅನುಭವಿಸಿದ ನಂತರ ಮಧ್ಯಂತರ ಜಾಮೀನಿನ ಮೇಲೆ ಇಂದು ನಟ ದರ್ಶನ್ ಬಿಡುಗಡೆಯಾಗಿದ್ದು, ಅವರ ಅಭಿಮಾನಿ ವಯಲದಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಇದೇ ರೀತಿ ದರ್ಶನ್ ರಿಲೀಸ್ ಆದ ಸುದ್ದಿ ಕೇಳಿ ಅಭಿಮಾನಿಯೊಬ್ಬರು ಖುಷಿಯಿಂದ ಸಂಭ್ರಮಿಸಿರುವ ರೀತಿ ಈಗ ವೈರಲ್ ಆಗ್ತಿದೆ.

ಹಲವು ದಿನಗಳಿಂದ ಈ ಕ್ಷಣಗಳಿಗೆ ಕಾದಿದ್ದ ಅಭಿಮಾನಿಯೊಬ್ಬರು, ತಮ್ಮ ಮನೆಯ ಟಿವಿಯಲ್ಲಿ ದರ್ಶನ್ ರಿಲೀಸ್ ಆಗುವ ದೃಶ್ಯಗಳನ್ನು ನೋಡಿ ಖುಷಿಯಲ್ಲಿ ಕುಣಿದು ಸಂಭ್ರಮಿಸಿದ್ದಾರೆ. ಕೇವಲ ಓರ್ವ ವ್ಯಕ್ತಿ ಮಾತ್ರವಲ್ಲದೇ, ಇಡೀ ಕುಟುಂಬವೇ ಖುಷಿಯಲ್ಲಿ ಸಂಭ್ರಮಿಸಿದೆ.

ಇದೇ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರು, ಟಿವಿಯಲ್ಲಿ ದರ್ಶನ್ ಫೋಟೋಗೆ ಮುತ್ತಿಟ್ಟು ಸಂಭ್ರಮಿಸಿ ಅಭಿಮಾನ ಮೆರೆದಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ನೋಡಿ ಬಾಸ್ ನಿಮ್ಮ ಮೇಲೆ ಎಷ್ಟು ಪ್ರೀತಿ ಇಟ್ಕೊಂಡಿದ್ದಾರೆ ಎಂದು ವಿಡಿಯೋ ಷೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!