Sunday, November 10, 2024
Homeಕ್ರೈಂDarshan Release : 'ಅಪ್ಪ ನೀನೇ ನನ್ನ ಜಗತ್ತು..' ದರ್ಶನ್​ ಪುತ್ರ ವಿನಿಶ್ ಭಾವನಾತ್ಮಕ ಪೋಸ್ಟ್

Darshan Release : ‘ಅಪ್ಪ ನೀನೇ ನನ್ನ ಜಗತ್ತು..’ ದರ್ಶನ್​ ಪುತ್ರ ವಿನಿಶ್ ಭಾವನಾತ್ಮಕ ಪೋಸ್ಟ್

ಬೆಂಗಳೂರು : ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದ ನಟ ದರ್ಶನ್​​ 131ಕ್ಕೂ ಹೆಚ್ಚು ದಿನಗಳ ನಂತರ ಇಂದು ಷರತ್ತುಬದ್ಧ ಮಧ್ಯಂತರ ಜಾಮೀನಿನ ಮೇಲೆ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ.

ಇದರಿಂದ ಡಿ ಬಾಸ್​​ ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದ್ದಾರೆ. ದರ್ಶನ್ ರಿಲೀಸ್​​ ಆಗುತ್ತಿದ್ದಂತೆ ಪುತ್ರ ವಿನಿಶ್​ ತನ್ನ ಅಪ್ಪನ ಕುರಿತಾಗಿ ಇನ್ಸ್​​​​ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.

ತಂದೆ ಮತ್ತು ಪುತ್ರನ ನಡುವಿನ ಪ್ರಿತಿಯ ಮೇಲೆ ಬೆಳಕು ಚೆಲ್ಲುವ ಅನಿಮಲ್​​ ಚಿತ್ರದ ಹಾಡನ್ನು ಕಿಂಗ್ ಎಮೊಜಿಗೆ ಬಳಸಿ ಪೋಸ್ಟ್​ ಮಾಡಿದ್ದಾರೆ. ‘ಆಕಾಶದಲ್ಲಿ ನನ್ನ ಒಂದು ನಕ್ಷತ್ರವಿದೆ..ಆ ನಕ್ಷತ್ರ ನೀನೇ ಅಪ್ಪ.. ಅಪ್ಪ ನೀನು ನನ್ನ ಜೀವ.. ನೀನೇ ನನ್ನ ಜಗತ್ತು.. ನೀನೇ ನನ್ನ ದೈವ.. ನಿನ್ನ ಬಿಟ್ಟರೆ ಬೇರೆ ಇಲ್ಲ..’ ಎಂಬ ಅರ್ಥವನ್ನು ನೀಡುವ ಹಾಡನ್ನು ವಿನಿಶ್ ತಮ್ಮ​ ಭಾವನಾತ್ಮಕ ಪೋಸ್ಟ್​​​ಗೆ ಬಳಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!