Sunday, November 10, 2024
Homeಕ್ರೈಂDarshan : ಪುತ್ರನ ಜತೆ 'ಡಿ ಬಾಸ್' ರಿಲ್ಯಾಕ್ಸ್..! ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲು ?

Darshan : ಪುತ್ರನ ಜತೆ ‘ಡಿ ಬಾಸ್’ ರಿಲ್ಯಾಕ್ಸ್..! ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲು ?

ಬೆಂಗಳೂರು : ಸ್ಯಾಂಡಲ್ ವುಡ್ ಡಿ ಬಾಸ್ ನಟ ದರ್ಶನ್ ಬೆಂಗಳೂರಿನ ಹೊಸಕೆರೆಹಳ್ಳಿಯ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ ನಲ್ಲಿ ರಿಲ್ಯಾಕ್ಸ್ ಮಾಡ್ತಿದ್ದಾರೆ. 131 ದಿವಸ ಜೈಲುವಾಸದ ನಂತರ ಕುಟುಂಬದ ಸದಸ್ಯರ ಜತೆ ಕಾಲ ಕಳೆಯುತ್ತಿದ್ದಾರೆ. ಇವತ್ತು ಪುತ್ರ ವಿನೀಶ್ ಜನ್ಮದಿನ ಆಗಿರೋದ್ರಿಂದ ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿ ವಿಶ್ರಾಂತಿ ಮೊರೆ ಹೋಗಿದ್ದಾರೆ.

ಬುಧವಾರ ತಡರಾತ್ರಿ ಅಪ್ಪನ ನೋಡೋಕೆ ಬಂದ ಪುತ್ರ ವಿನೀಶ್ ನೋಡ್ತಿದ್ದ ಹಾಗೆ ದರ್ಶನ್ ಕಣ್ಣೀರಾಗಿದ್ದಾರೆ. ಅಪ್ಪ ದರ್ಶನ್ ಹಾಗೂ ಮಗ ವಿನೀಶ್ ಪರಸ್ಪರ ಆಲಂಗಿಸಿ ಮಾತಾಡಿದ್ದಾರೆ. ಈ ಭಾವನಾತ್ಮಕ ಕ್ಷಣಕ್ಕೆ ಪತ್ನಿ ವಿಜಯಲಕ್ಷ್ಮಿ ಸಾಕ್ಷಿಯಾಗಿದ್ದಾರೆ.

ದೀಪಾವಳಿ ಹಾಗೂ ಮಗನ ಬರ್ತ್ ಡೇ ದಿನವೇ ದರ್ಶನ್ ರಿಲೀಸ್ ಆಗಿದ್ದು ಅವರಿಗೆ ಕೊಂಚ ಸಮಾಧಾನ ತಂದಿದೆ. ಇನ್ನು, ದರ್ಶನ್ ಸದ್ಯಕ್ಕೆ ಹೊರಗಿನ ಜನರನ್ನ ಭೇಟಿ ಮಾಡಲು ಮನಸ್ಸು ಮಾಡಿಲ್ಲ ಎಂಬ ಮಾಹಿತಿ ಅವರ ಆಪ್ತ ವಲಯದಿಂದ ಗೊತ್ತಾಗಿದೆ.

ದರ್ಶನ್ ಗೆ ಬೆನ್ನು ನೋವು ತೀವ್ರವಾಗಿ ಕಾಡುತ್ತಿದೆ. ಇವತ್ತು ಸಂಜೆವರೆಗೂ ಮನೆಯಲ್ಲೇ ರೆಸ್ಟ್ ಮಾಡಿ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ವೈದ್ಯರ ಸಲಹೆ ಪಡೆದು ದರ್ಶನ್ ಅಡ್ಮಿಟ್ ಆಗುವ ಬಗ್ಗೆ ಸುಳಿವು ದೊರೆತಿದೆ. 1 ವಾರದ ಬಳಿಕ ಕೋರ್ಟ್ ಗೆ ದರ್ಶನ್ ವೈದ್ಯಕೀಯ ವರದಿ ತಲುಪಿಸಬೇಕಾಗಿದ್ದು, ಬೇಲ್ ಗೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಹೆಚ್ಚಿನ ಸುದ್ದಿ

error: Content is protected !!