Saturday, January 25, 2025
Homeಟಾಪ್ ನ್ಯೂಸ್ಬಾಲಕನಿಗೆ ತನ್ನ ನಾಲಗೆ ಚೀಪುವಂತೆ ಹೇಳಿದ ದಲೈಲಾಮಾ: ಭಾರೀ ಆಕ್ರೋಶ

ಬಾಲಕನಿಗೆ ತನ್ನ ನಾಲಗೆ ಚೀಪುವಂತೆ ಹೇಳಿದ ದಲೈಲಾಮಾ: ಭಾರೀ ಆಕ್ರೋಶ

ನವದೆಹಲಿ: ಟಿಬೆಟಿಯನ್ ಬೌದ್ಧ ಧರ್ಮಗುರು ದಲೈಲಾಮಾ ಬಾಲಕನೊಬ್ಬನ ತುಟಿಗೆ ಚುಂಬಿಸುತ್ತಿರುವ ಮತ್ತು ತನ್ನ ನಾಲಗೆಯನ್ನು ಚೀಪುವಂತೆ ಹೇಳಿದ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

ದಲೈಲಾಮಾ ಅವರಿಗೆ ಗೌರವ ಸಲ್ಲಿಸಲು ಬಾಲಕ ಬಾಗಿದಾಗ ದಲೈಲಾಮಾ ಬಾಲಕನ ತುಟಿಗಳಿಗೆ ಚುಂಬಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆ ಧರಮ್‌ಶಾಲಾ ಮೊನಾಸ್ಟ್ರಿಯಲ್ಲಿ ನಡೆದಿದೆ ಎನ್ನಲಾಗಿದೆ

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ದಲೈಲಾಮಾ ನಡೆಯನ್ನು ಖಂಡಿಸಿದ್ದಾರೆ. ದಲೈಲಾಮಾರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಮಹಿಳೆಯರ ಕುರಿತಾಗಿ ಹೇಳಿಕೊಂದನ್ನು ನೀಡಿ ದಲೈಲಾಮಾ ವಿವಾದ ಸೃಷ್ಟಿಸಿದ್ದರು. 2019ರಲ್ಲಿ ಹೇಳಿಕೆಯೊಂದನ್ನು ನೀಡಿದ್ದ ದಲೈ ಲಾಮಾ ತನ್ನ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಆಕೆ “ಆಕರ್ಷಕ” ವಾಗಿರಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

ಹೆಚ್ಚಿನ ಸುದ್ದಿ

error: Content is protected !!