ನವದೆಹಲಿ: ಬಾಲಕನ ತುಟಿಯನ್ನು ಚುಂಬಿಸಿ, ತನ್ನ ನಾಲಗೆಯನ್ನು ಚೀಪುವಂತೆ ಹೇಳಿದ ಪ್ರಕರಣ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈಲಾಮ ಕ್ಷಮೆ ಯಾಚಿಸಿದ್ದಾರೆ.
ತಾನು ಭೇಟಿಯಾಗುವ ಮುಗ್ಧ ಜನರೊಂದಿಗೆ ಈ ರೀತಿ ತಮಾಷೆ ಮಾಡುತ್ತೇನೆ ಎಂದು ದಲೈಲಾಮ ಹೇಳಿದ್ದು, ಬಾಲಕ ಮತ್ತು ಬಾಲಕನ ಕುಟುಂಬಸ್ಥರ ಜೊತೆ ಅವರು ಕ್ಷಮೆಯಾಚಿಸಿದ್ದಾರೆ.
“ದಲೈಲಾಮ ಮತ್ತು ಬಾಲಕ ಭೇಟಿಯಾದ ವಿಡಿಯೋ ಇತ್ತೀಚಿಗೆ ವೈರಲ್ ಆಗಿದೆ. ದಲೈಲಾಮ ಅವರು ಬಾಲಕ, ಬಾಲಕನ ಕುಟುಂಬ ಮತ್ತು ಜಗತ್ತಿನಾದ್ಯಂತ ಇರುವ ಸ್ನೇಹಿತರ ಜೊತೆ ಕ್ಷಮೆ ಯಾಚಿಸುತ್ತಿದ್ದಾರೆ. ದಲೈಲಾಮ ಅವರು ತಮ್ಮನ್ನು ಭೇಟಿಯಾಗುವ ಮುಗ್ದ ಜನರಲ್ಲಿ ಈ ರೀತಿಯ ತಮಾಷೆಗಳನ್ನು ಮಾಡುತ್ತಾರೆ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.